ಶನಿವಾರಸಂತೆ, ಜು. 21: ಸಹೋದರರಿಬ್ಬರಿಗೆ ಆಸ್ತಿ ಮತ್ತು ಮನೆಯ ವಿಚಾರದಲ್ಲಿ ಜಗಳ ಉಂಟಾಗಿ, ತಮ್ಮ ಅಣ್ಣನಿಗೆ ಕಲ್ಲಿನಿಂದ ಹಲ್ಲೆ ಮಾಡಿ; ಕೊಲೆ ಬೆದರಿಕೆ ಹಾಕಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಗೋಪಾಲಪುರ ಗ್ರಾಮದ ನಿವಾಸಿ ವಿಜಯಕುಮಾರ್ ಹಾಗೂ ಅವರ ತಮ್ಮ ವಿಶ್ವನಾಥ್ ನಡುವೆ ಜಗಳ ನಡೆದಿದ್ದು, ದೂರು ದಾಖಲಾಗಿದೆ.