ಶನಿವಾರಸಂತೆ, ಜು. 21: ಮನೆಯವರ ನಿರ್ಲಕ್ಷ್ಯಕ್ಕೆ ಒಳಗಾಗಿ ಬುದ್ಧಿಭ್ರಮಣೆನೊಳಗಾಗಿದ್ದ ವ್ಯಕ್ತಿಯೊಬ್ಬರು 30 ವರ್ಷಗಳಿಂದ ಶನಿವಾರಸಂತೆ, ಉಚ್ಚಂಗಿ, ಚಂಗಡಹಳ್ಳಿ ಹಾಗೂ ಇತರ ಊರುಗಳಲ್ಲಿ ಅಲೆದಾಡುತ್ತಾ ಭಿಕ್ಷೆ ಬೇಡುತ್ತಾ ಜೀವಿಸುತ್ತಿದ್ದಾರೆ.
ಗುಂಡ್ಲುಪೇಟೆಯ ನಾನ್ಗಲ್ಲಿ ಊರಿನ ನಾಗರಾಜ್ (50) ಅನಾಥರಂತೆ ಬದುಕು ಸಾಗಿಸುತ್ತಿದ್ದಾರೆ. ಈ ವ್ಯಕ್ತಿಗೆ ಚಿರಪರಿಚಿತರು ಅನುಕಂಪ ತೋರಿ ಊಟ-ತಿಂಡಿ ನೀಡುತ್ತಾರೆ. ಇಲ್ಲಿನ ಆದರ್ಶ ವಿಜಯ ವಿನಾಯಕ ಸೇವಾ ಸಮಿತಿಯ ಪದಾಧಿಕಾರಿಗಳು ನಾಗರಾಜ ಬಗ್ಗೆ ಮಾನವೀಯತೆ ಹೊಂದಿದ್ದು, ಆಗಾಗ್ಗೆ ಕರೆತಂದು ತಲೆ ಕೂದಲು ಕತ್ತರಿಸಿ, ಕೈ-ಕಾಲಿನ ಉಗುರು ತೆಗೆದು, ಸ್ನಾನ ಮಾಡಿಸಿ ಸ್ವಚ್ಛಗೊಳಿಸಿ ನೂತನ ವಸ್ತ್ರ ಕೊಡುವ ಮೂಲಕ ಆಸರೆ ಕಲ್ಪಿಸಿದ್ದಾರೆ.