ಮಡಿಕೇರಿ, ಜು. 20: ಮಡಿಕೇರಿಯಲ್ಲಿ ಕಳೆದೆರಡು ದಿನಗಳಿಂದ ಸೋನೆ ಸುರಿದಂತೆ ಒಮ್ಮೊಮ್ಮೆ ಜೋರಾಗಿ ಮಳೆ ಸುರಿಯುತ್ತಿದೆ. ಇದು ಮಳೆಗಾಲದ ನಿಜವಾದ ಮಳೆಯೋ ಅಥವಾ ಮೋಡ ಬಿತ್ತನೆಯ ಕೃತಕ ಮಳೆಯೋ ಎಂಬ ಸಂಶಯ ಕಾಡಿದೆ. ಹವಾಮಾನ ಇಲಾಖೆಯ ಮಾಹಿತಿಯನ್ವಯ ಜಿಲ್ಲಾಡಳಿತ ಜಿಲ್ಲೆಯಲ್ಲಿ ‘ರೆಡ್ ಅಲರ್ಟ್’ ಘೋಷಣೆ ಮಾಡಿದೆ. ಇದಕ್ಕೆ ಸರಿಹೊಂದು ವಂತೆ ಮಡಿಕೇರಿಯಲ್ಲಿ ಕೆಂಪು ಮಳೆ ಬಂದಿದೆ.

ಎರಡು ಮೂರು ದಿನಗಳಿಂದ ಕೆಂಪು ಮಳೆ ಬೀಳುತ್ತಿದ್ದು, ಗೌಡ ಸಮಾಜ ಬಳಿಯಿಂದ ಚೈನ್‍ಗೇಟ್‍ಗೆ ತೆರಳುವ ರಸ್ತೆ ಬಳಿ ವಾಸವಿರುವ ಪೂಜಾರಿರ ಬೆಳ್ಯಪ್ಪ ಅವರ ಮನೆಯ ಆರ್‍ಸಿಸಿ ಮೇಲೆ ಇರಿಸಿದ್ದ ಬಕೆಟ್‍ಗಳಲ್ಲಿ ಕೆಂಪು ನೀರು ತುಂಬಿದೆ. ಬೆಳ್ಯಪ್ಪ ಅದನ್ನು ಸಂಗ್ರಹಿಸಿಟ್ಟಿದ್ದಾರೆ.

ಮಳೆ ಸುರಿಯುತ್ತಿರುವ ರೀತಿ, ಹವಮಾನ ಇಲಾಖೆ ಆಗಾಗ್ಗೆ ‘ರೆಡ್ ಅಲರ್ಟ್ - ಆರೆಂಜ್ ಅಲರ್ಟ್’ ಎಂದು ಘೋಷಣೆ ಮಾಡುತ್ತಿರು ವದೂ ಸಂಶಯಕ್ಕೆಡೆಮಾಡುತ್ತಿದೆ. ಕಳೆದ ವರ್ಷ ವಿಕೋಪ ಉಂಟಾಗಿ ಸರ್ವನಾಶ ಆಗುವವರೆಗೂ ಯಾವದೇ ಇಲಾಖೆ, ಜಿಲ್ಲಾಡಳಿತ ಯಾವದೇ ಮುನ್ಸೂಚನೆ ನೀಡಿರಲಿಲ್ಲ. ಅದು ಪ್ರಾಕೃತಿಕ ಸಹಜ ಪ್ರಕ್ರಿಯೆಯಾಗಿತ್ತು. ಆದರೆ ಈ ಬಾರಿ ಮಳೆಗಾಲ ಮುಗಿ ಯುತ್ತಾ ಬಂದರೂ ಮಳೆ ಸರಿಯಾಗಿ ಆಗುತ್ತಿಲ್ಲ. ಆದರೂ ‘ಅಲರ್ಟ್’ ಎಂಬ ಘೋಷಣೆ ಆಗಾಗ್ಗೆ ಬರುತ್ತಿರುವದೇ ಜನರÀಲ್ಲಿ ಗೊಂದಲ ಮೂಡಿಸಿದೆ.

-ಸಂತೋಷ್