ಮಡಿಕೇರಿ, ಜು. 19: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2019-20ನೇ ಸಾಲಿನಲ್ಲಿ ಚೇತನಾ ಯೋಜನೆಯಡಿ ಜಿಲ್ಲೆಗೆ 6 ಗುರಿಗಳನ್ನು ನಿಗದಿಪಡಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಲೈಂಗಿಕ ವೃತ್ತಿ ನಿರತ ಸ್ವಯಂ ಉದ್ಯೋಗಕ್ಕಾಗಿ ಹಾಗೂ ಸಮಾಜದಲ್ಲಿ ಗೌರವಾನ್ವಿತ ಜೀವನವನ್ನು ನಡೆಸಲು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಿಗಮವು ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಈ ಯೋಜನೆಯಡಿ ಸ್ವ-ಉದ್ಯೋಗ ಕೈಗೊಳ್ಳಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಪ್ರತಿ ಫಲಾನುಭವಿಗೆ ಘಟಕ ವೆಚ್ಚ ರೂ. 50 ಸಾವಿರಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಆರ್‍ಟಿಜಿಎಸ್ ಮೂಲಕ ಜಮೆ ಮಾಡಲಾಗುತ್ತಿದೆ. ಈ ಪೈಕಿ ರೂ. 25 ಸಾವಿರಗಳ ನೇರ ಸಾಲ ಹಾಗೂ ರೂ. 25 ಸಾವಿರಗಳ ಸಹಾಯಧನವನ್ನಾಗಿ ನೀಡಲಾಗುವದು. ಸಂಬಂಧಪಟ್ಟ ದಾಖಲೆಗಳೊಂದಿಗೆ ರೂ. 50 ಛಾಪಾ ಕಾಗದವನ್ನು ಲಗತ್ತಿಸಿ ಕಚೇರಿಗೆ ಸಲ್ಲಿಸುವದು. ಆಸಕ್ತರು ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ/ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್, ಮೈಸೂರು ರಸ್ತೆ, ಮಡಿಕೇರಿ ದೂ. 08272-298379 ನ್ನು ಸಂಪರ್ಕಿಸಬಹುದು.

ಅರ್ಜಿದಾರರು ಚುನಾವಣಾ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್, ನಿಗಮದೊಂದಿಗೆ ಸಾಲದ ಕುರಿತಾಗಿ ಮಾಡಿಕೊಳ್ಳುವ ಒಪ್ಪಂದ ಪತ್ರ, ಫಲಾನುಭವಿ ಸುಸ್ತಿದಾರರಾಗಿರುವದಿಲ್ಲ ಎಂದು ಸ್ವಯಂ ದೃಢೀಕರಣ ಇರುವ ರೂ. 50 ಛಾಪಾ ಕಾಗದ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಆದಾಯ ಮತ್ತು ಜಾತಿ ದೃಢೀಕರಣ ಪತ್ರ, 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮತ್ತು ವ್ಯಾಪಾರ ಮಾಡುತ್ತಿರುವ ಭಾವಚಿತ್ರ-2, ಬ್ಯಾಂಕ್‍ನಲ್ಲಿ ಯಾವದೇ ಸಾಲವನ್ನು ಹೊಂದಿಲ್ಲವೆಂದು ನಿರಾಕ್ಷೇಪಣ ದೃಢೀಕರಣ ಪತ್ರ ಸಲ್ಲಿಸಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಸಹಾಯಧನಗಳ ಸೌಲಭ್ಯ ನೀಡಲು

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ ಸ್ವಯಂ ಉದ್ಯೋಗ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಶ್ರಮಶಕ್ತಿ ಸಾಲ ಹಾಗೂ ಸಹಾಯಧನ ಯೋಜನೆ, ಮೈಕ್ರೋಲೋನ್ ಯೋಜನೆ, ಪಶು ಸಂಗೋಪನಾ ಯೋಜನೆ, ಅಲ್ಪಸಂಖ್ಯಾತರ ರೈತರ ಕಲ್ಯಾಣ ಯೋಜನೆ, ಅಲ್ಪಸಂಖ್ಯಾತರ ಟ್ಯಾಕ್ಸಿ ಕಲ್ಯಾಣ ಯೋಜನೆ, ಗೃಹ ನಿರ್ಮಾಣ ಮಾರ್ಜಿನ್ ಹಣ ಸಾಲ ಯೋಜನೆ, ಕೃಷಿ ಭೂಮಿ ಖರೀದಿ ಯೋಜನೆಯಡಿ, ಆಟೋ ಮೊಬೈಲ್ ಸರ್ವೀಸ್ ತರಬೇತಿ ಹಾಗೂ ಸಾಲ ಯೋಜನೆ, ಮನೆ ಮಳಿಗೆ ಯೋಜನೆ, ಪ್ರವಾಸಿ ಸಾಲ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ ನಿಗಮದಿಂದ ಸಾಲ ಹಾಗೂ ಸಹಾಯಧನಗಳ ಸೌಲಭ್ಯ ನೀಡಲು ಆನ್‍ಲೈನ್ ತಿತಿತಿ.ಞmಜಛಿ.ಞಚಿಡಿ.ಟಿiಛಿ.iಟಿ/ಟoಚಿಟಿ/ಟogiಟಿ/ಚಿsಠಿx ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ, ರಾಮಮಂದಿರದ ಹಿಂಭಾಗ, ಹೊಟೇಲ್ ಹಿಲ್ ವ್ಯೂ ಹತ್ತಿರ, ಹಿಲ್ ರಸ್ತೆ, ಮಡಿಕೇರಿ, ಇವರನ್ನು ಕಚೇರಿ ವೇಳೆಯಲ್ಲಿ ದೂ. 08272-220449, 8971282932 ನ್ನು ಸಂಪರ್ಕಿಸಬಹುದು.

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 2019-20ನೇ ಸಾಲಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಜಿಲ್ಲೆಗೆ 8 ಗುರಿ ನಿಗದಿಪಡಿಸಲಾಗಿದ್ದು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರು ಗೌರವಾನ್ವಿತ ಜೀವನವನ್ನು ನಡೆಸಲು ಹಾಗೂ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಿಗಮವು ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯಡಿ ಸ್ವ-ಉದ್ಯೋಗ ಕೈಗೊಳ್ಳಲು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಪ್ರತಿ ಫಲಾನುಭವಿಗೆ ಘಟಕ ವೆಚ್ಚ ರೂ. 50 ಸಾವಿರಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಆರ್‍ಟಿಜಿಎಸ್ ಮೂಲಕ ಜಮೆ ಮಾಡಲಾಗುತ್ತಿದೆ. ಈ ಪೈಕಿ ರೂ. 25 ಸಾವಿರಗಳ ನೇರ ಸಾಲ ಹಾಗೂ ರೂ. 25 ಸಾವಿರಗಳ ಸಹಾಯಧನ ನೀಡಲಾಗುತ್ತದೆ. ಸಂಬಂಧಪಟ್ಟ ದಾಖಲೆಗಳೊಂದಿಗೆ ಲಿಂಗತ್ವ ಅಲ್ಪಸಂಖ್ಯಾತರ ದೃಢೀಕರಣ ಪತ್ರ ಹಾಗೂ ರೂ. 50 ಛಾಪಾ ಕಾಗದವನ್ನು ಲಗತ್ತಿಸಿ ಈ ಕಚೇರಿಗೆ ಸಲ್ಲಿಸುವದು. ಆಸಕ್ತರು ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ/ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್, ಮೈಸೂರು ರಸ್ತೆ, ಮಡಿಕೇರಿ ದೂ. 08272-298379 ನ್ನು ಸಂಪರ್ಕಿಸಬಹುದು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಸಹಾಯ ಧನಕ್ಕೆ

ಸೀವಿಂಗ್ ಮಿಷನ್ ಆಪರೇಟರ್ ತರಬೇತಿ ಪಡೆದ ಗ್ರಾಮೀಣ ಪ್ರದೇಶದ ಮಹಿಳಾ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ರೂ. 30 ಸಾವಿರಗಳ ಘಟಕ ವೆಚ್ಚದಲ್ಲಿ ಒಂದು ಇಂಡಸ್ಟ್ರಿಯಲ್ ಹೊಲಿಗೆ ಯಂತ್ರ ಖರೀದಿಸಲು ಶೇ. 50 ರಷ್ಟು ಸಹಾಯಧನ ನೀಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಫಲಾನುಭವಿಯು ಸ್ವಂತ/ ಲೀಸ್/ ಬಾಡಿಗೆ ಮನೆ ಹೊಂದಿರಬೇಕು. ಕೈಮಗ್ಗ ಮತ್ತು ಜವಳಿ ಇಲಾಖೆಯ ಜವಳಿ ನೀತಿಯಡಿ ಸೀವಿಂಗ್ ಮೆಷಿನ್ ಆಪರೇಟರ್ ತರಬೇತಿ ಪಡೆದ ಮಹಿಳೆಯಾಗಿರಬೇಕು.

ಘಟಕ ವೆಚ್ಚ- ಪ್ರತಿ ಇಂಡಸ್ಟ್ರಿಯಲ್ ಹೊಲಿಗೆ ಯಂತ್ರಕ್ಕೆ ರೂ. 30 ಸಾವಿರ ಇಂಡಸ್ಟ್ರಿಯಲ್ ಹೊಲಿಗೆ ಯಂತ್ರ ಅಳವಡಿಸಲು ಅವಶ್ಯವಿರುವ ಮೊತ್ತವನ್ನು ಬ್ಯಾಂಕ್/ ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಅಥವಾ ಸ್ವಂತ ಬಂಡವಾಳದೊಂದಿಗೆ ಅನುಷ್ಠಾನಗೊಳಿಸುವದು. ಘಟಕ ಸ್ಥಾಪಿಸಿದ ನಂತರ ಸರ್ಕಾರದ ಸಹಾಯಧನಕ್ಕೆ ಪ್ರಸ್ತಾವನೆ ಸಲ್ಲಿಸುವುದು. ಸರ್ಕಾರದ ಸಹಾಯಧನ ಘಟಕ ವೆಚ್ಚದ ಶೇ. 50 ರಂತೆ ಸಾಮಾನ್ಯ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಗರಿಷ್ಠ ರೂ. 15 ಸಾವಿರ ನೀಡಲಾಗುವದು.

ಅರ್ಜಿಗಳನ್ನು ಕಚೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರ್ ರಸ್ತೆ, ಮಡಿಕೇರಿ, ದೂರವಾಣಿ ಸಂಖ್ಯೆ: 08272–220365 ರವರ ಕಚೇರಿಯನ್ನು ಸಂಪರ್ಕಿಸಬಹುದು.

ವಿಶೇಷ ಘಟಕ ಯೋಜನೆಯಡಿ

ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ 2018-19ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ಜಾನಪದ ಗಾಯನ, ತಮಟೆವಾದನ, ಕೋಲಾಟ, ಸೋಬಾನೆ ಪದ, ತತ್ವಪದ, ತಂಬೂರಿ ಪದ ಕಲಿಕಾ ತರಬೇತಿ ಶಿಬಿರವು ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಮೂಲ ಗುರುಗಳಿಂದ ತರಬೇತಿ ನೀಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

18 ರಿಂದ 35 ವರ್ಷದೊಳಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಇರುತ್ತದೆ. ಅರ್ಜಿಗಳನ್ನು ರಿಜಿಸ್ಟ್ರಾರ್ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ಜಿಲ್ಲಾ ಸಹಾಯಕ ನಿರ್ದೇಶಕರುಗಳ ಕಾರ್ಯಾಲಯದಿಂದ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ದೂ. 080-22215509 ಅನ್ನು ಸಂಪರ್ಕಿಸಬಹುದು.