ಶನಿವಾರಸಂತೆ, ಜು. 20: ನಿಡ್ತ ಪಂಚಾಯಿತಿ ವ್ಯಾಪ್ತಿಯ ಗೋಪಾಲಪುರ ಗ್ರಾಮದ ದಿವ್ಯ ಎನ್.ವಿ. ಎಂಬಾಕೆಯ ಗಂಡ, ಮಾವ, ಅತ್ತೆ ಮೂವರು ಆಕೆಗೆ ಪ್ರತಿನಿತ್ಯ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದುದಲ್ಲದೆ ತವರುಮನೆಯಿಂದ ಹಣ ತರುವಂತೆ ಒತ್ತಾಯಿಸುತ್ತಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವದಾಗಿ ದಿವ್ಯ ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿವ್ಯ 4 ವರ್ಷಗಳ ಹಿಂದೆ ಗೋಪಾಲಪುರ ಗ್ರಾಮದ ವೇದಕುಮಾರ್ ಎಂಬವರನ್ನು ಮದುವೆಯಾಗಿದ್ದು, 2 ವರ್ಷದ ಹೆಣ್ಣುಮಗುವಿದೆ. ಈಗ್ಗೆ 2 ವರ್ಷಗಳಿಂದಲೂ ಪ್ರತಿನಿತ್ಯ ಗಂಡ ವೇದಕುಮಾರ್, ಮಾವ ಮಲ್ಲೇಶ್ ಹಾಗೂ ಅತ್ತೆ ಪುಟ್ಟಗೌರಿ ಅವರುಗಳು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದುದಲ್ಲದೆ, ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಎಂಬದಾಗಿ ಒತ್ತಾಯಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದು, ಮಂಗಳವಾರ ರಾತ್ರಿ ಮೂವರು, ದಿವ್ಯಾಳ ತಲೆ ಜುಟ್ಟನ್ನು ಹಿಡಿದು ಎಳೆದಾಡಿದ್ದಲ್ಲದೆ, ಸೀಮೆಎಣ್ಣೆ ಸುರಿದು ಸುಟ್ಟು ಹಾಕುತ್ತೇವೆಂದು ಬೆದರಿಕೆ ಹಾಕಿರುವದಾಗಿ ಶನಿವಾರಸಂತೆ ಪೊಲೀಸ್ ಠಾಣೆಗೆ ದಿವ್ಯ ನೀಡಿದ ದೂರಿನ ಮೇರೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‍ಟೇಬಲ್ ಬೋಪಣ್ಣ ಕಲಂ ವಿಧಿ 504, 506 ರೆ/ವಿ 34 ಐ.ಪಿ.ಸಿ. ಪ್ರಕರಣ ದಾಖಲಿಸಿರುತ್ತಾರೆ.