ವೀರಾಜಪೇಟೆ, ಜು. 19: ಇತ್ತೀಚೆಗೆ ಬೆಂಗಳೂರಿನ ನಾಟ್ಯ ಕಲಾ ಮತ್ತು ಸಾಂಸ್ಕøತಿಕ ಕೇಂದ್ರ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ನಾಟ್ಯ ತರಂಗ ಫೆಸ್ಟಿವೆಲ್ ಕಾರ್ಯಕ್ರಮದಲ್ಲಿ ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿನಿ ಮಧುಮಿತಗೆ ಭರತನಾಟ್ಯ ವಿಭಾಗದಲ್ಲಿ “ನಾಟ್ಯರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈಕೆ ವೀರಾಜಪೇಟೆಯ ಅಶ್ವಿನ್-ಅಂಬಿಕಾ ದಂಪತಿಯ ಪುತ್ರಿ ಹಾಗೂ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ.