ಚೆಟ್ಟಳ್ಳಿ, ಜು. 20: ಯೂತ್ ಫ್ರೆಂಡ್ಸ್ ಕುಂಜಿಲ ಇವರ ವತಿಯಿಂದ ಕುಂಜಿಲದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕೆಸರು ಗದ್ದೆ ಕಾಲ್ಚೆಂಡು ಪಂದ್ಯಾಟದಲ್ಲಿ ಬುಲೆಟ್ ಫ್ರೆಂಡ್ಸ್ ಕೊಂಡಂಗೇರಿ, ಸೆವೆನ್ ಸ್ಟಾರ್ ಕಡಂಗ, ಎಡಪಾಲ, ಲಕ್ಕಿ ಬ್ರದರ್ಸ್ ಕುಂಜಿಲ ತಂಡವು ಮುಂದಿನ ಹಂತಕ್ಕೆ ಅರ್ಹತೆ ಪಡೆದಿವೆ.

ಉದ್ಘಾಟನಾ ಪಂದ್ಯವು ಬುಲೆಟ್ ಫ್ರೆಂಡ್ಸ್ ಕೊಂಡಂಗೇರಿ ಹಾಗೂ ಆಲ್ ಸ್ಟಾರ್ ಗೋಣಿಕೊಪ್ಪ ತಂಡಗಳು ನಡುವೆ ನಡೆಯಿತು.

ಎರಡು ತಂಡಗಳ ನಡುವಿನ ಜಿದ್ದಾಜಿದ್ದಿನ ಹೋರಾಟದಲ್ಲಿ ಗೋಲುಗಳಿಸಲು ಎರಡು ತಂಡಗಳÀು ವಿಫಲವಾದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.

ಪೆನಾಲ್ಟಿ ಶೂಟೌಟ್‍ನಲ್ಲಿ ಬುಲೆಟ್ ಫ್ರೆಂಡ್ಸ್ ಕೊಂಡಂಗೇರಿ ತಂಡವು 3-1 ಗೋಲುಗಳ ಅಂತರದಿಂದ ಗೆಲವು ಸಾಧಿಸಿತು.

ಸಿಟಿ ಬ್ರದರ್ಸ್ ಕಡಂಗ ಹಾಗೂ ಫೋರ್ ಸ್ಟಾರ್ ಎಡಪಾಲ ತಂಡಗಳು ನಡುವಿನ ಪಂದ್ಯದಲ್ಲಿ ಎಡಪಾಲ ತಂಡವು 1-0 ಗೋಲುಗಳ ಅಂತರದಿಂದ ಗೆದ್ದಿತು.

ಮೂರನೇ ಪಂದ್ಯಾಟವು ಚಾಲೆಂಜರ್ಸ್ ಬಾಯ್ಸ್ ಹಾಗೂ ಲಕ್ಕಿ ಬ್ರದರ್ಸ್ ಕುಂಜಿಲ ತಂಡಗಳ ನಡುವೆ ನಡೆಯಿತು. ಲಕ್ಕಿ ಬ್ರದರ್ಸ್ ಕುಂಜಿಲ ತಂಡವು 2-1 ಗೋಲುಗಳ ಅಂತರದಿಂದ ಗೆಲವು ಸಾಧಿಸಿತು.

ನಾಲ್ಕನೇ ಪಂದ್ಯಾಟವು ಸ್ಪಾರ್ಟಾ ಎಫ್.ಸಿ ನಾಪೋಕ್ಲು ಹಾಗೂ ಸೆವೆನ್ ಸ್ಟಾರ್ ಕಡಂಗ ತಂಡಗಳ ನಡುವೆ ನಡೆಯಿತು.

ಸೆವೆನ್ ಸ್ಟಾರ್ ಕಡಂಗ ತಂಡವು 1-0 ಗೋಲುಗಳ ಅಂತರದಿಂದ ಗೆಲವು ಸಾಧಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು.

-ಕೆ.ಎಂ. ಇಸ್ಮಾಯಿಲ್ ಕಂಡಕರೆ