ಸುಂಟಿಕೊಪ್ಪ, ಜು. 20: ರಾಜ್ಯ ವೀರಶೈವ ಯುವವೇದಿಕೆ ವತಿಯಿಂದ ಜಗÀದ್ಗುರು ರೇಣುಕಾಚಾರ್ಯ ಜಯಂತಿ, ರಂಭಾಪುರಿ ವೀರಸಿಂಹಾಸನಾಧೀಶ್ವರ 1008 ಜಗÀದ್ಗುರು ಪ್ರಸನ್ನ ರೇಣುಕಾ, ವೀರಸೋಮೇಶ್ವರ ಶಿವಾಚಾರ್ಯರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮ್ಮೇಳನ ತಾ. 21 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಮೇಕ್ರಿ ವೃತ್ತ, ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ವೀರಶೈವ ಲಿಂಗಾಯಿತ ಯುವ ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರು ಹಾಗೂ ರಾಜ್ಯ ಉಪಾಧ್ಯಕ್ಷ ಜಿ.ಜಿ. ಸತೀಶ ತಿಳಿಸಿದ್ದಾರೆ.