ಮಡಿಕೇರಿ, ಜು. 21: ಜರ್ಮನಿಯ ಬರ್ಲಿನ್‍ನಲ್ಲಿ ತಾ. 22 ರಿಂದ 28ರ ವರೆಗೆ ನಡೆಯಲಿರುವ 41ನೇ ಇಂಜಿನಿಯರಿಂಗ್ ಇನ್ ಮೆಡಿಸನ್ ಅಂಡ್ ಬಯಾಲಜಿ (ಇಒಃಅ) ಅಂತರ್ರಾಷ್ಟ್ರೀಯ ಸಮ್ಮೇಳನಕ್ಕೆ ಓರ್ವ ಪ್ರತಿನಿಧಿಯಾಗಿ ಕೊಡಗಿನ ಯುವತಿ ಪಾಲಚಂಡ ಪೂಜಿತಾ ಉತ್ತಪ್ಪ ಅವರು ತೆರಳುತ್ತಿದ್ದಾರಚೆನ್ನೈಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIಖಿ)ಯಲ್ಲಿ ಎಂ.ಎಸ್.ನಲ್ಲಿ ಸಂಶೋಧನೆ ನಡೆಸುತ್ತಿರುವ ಪೂಜಿತಾ ಅವರು ಸುಮಾರು 60 ರಾಷ್ಟ್ರಗಳು ಪಾಲ್ಗೊಳ್ಳುತ್ತಿರುವ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಡಾ. ಪೂಜಿತಾ ಅವರು ಮಂಡಿಸಿರುವ ಸಂಶೋಧನಾ ಪ್ರಬಂಧವಾದ ಅಂತರ್ರಾಷ್ಟ್ರೀಯ ಸಮ್ಮೇಳನಕ್ಕೆ ಪೂಜಿತಾ(ಮೊದಲ ಪುಟದಿಂದ) ‘ಪ್ರೊಸ್ಟೇಟ್ ಕ್ಯಾನ್ಸರ್ ಡಿಟೆಕ್ಷನ್ ಯುಸಿಂಗ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್’ ವಿಷಯಕ್ಕೆ ಸಂಬಂಧಿಸಿದಂತೆ ಈ ಸಮ್ಮೇಳನಕ್ಕೆ ಆಮಂತ್ರಿತರಾಗಿದ್ದಾರೆ. ಬಯೋಮೆಡಿಕಲ್ ಇಂಜಿನಿಯರಿಂಗ್ ರೇಂಜಿಂಗ್ ಫ್ರಮ್ ವೆಲ್‍ನೆಸ್‍ಟು ಇಂಟಿನ್ಸಿವ್ ಕೇರ್ ಮೆಡಿಸನ್ ವಿಚಾರಕ್ಕೆ ಸಂಬಂಧಿಸಿದಂತೆ ಈ ಸಮ್ಮೇಳನ ಜರುಗುಲಿದ್ದು, ಅಲ್ಲಿ ಇವರು ತಮ್ಮ ಸಂಶೋಧನಾ ಅಭಿಪ್ರಾಯವನ್ನು ವ್ಯಕ್ತಪಡಿಸಲಿದ್ದಾರೆ. ಡಾ. ಪೂಜಿತಾ ಈ ಹಿಂದೆ ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಗೋಣಿಕೊಪ್ಪ ವಿದ್ಯಾನಿಕೇತನದಲ್ಲಿ ದ್ವಿತೀಯ ಪಿ.ಯು.ಸಿ. ಬಳಿಕ ನಿಟ್ಟೆಯಲ್ಲಿ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಚೆನ್ನೈ ಇಂಡಿಯನ್ ಇನ್ಸ್ಟಿಟಿಟ್ಯೂಷನ್ ಆಫ್ ಟೆಕ್ನಾಲಜಿಯಲ್ಲಿ ಇವರು ಎಂ.ಎಸ್. ಮಾಡುತ್ತಿದ್ದಾರೆ. ಇವರು ಗೋಣಿಕೊಪ್ಪಲು ಹಾತೂರುವಿನ ನಿವಾಸಿ ಪಾಲಚಂಡ ಜಗನ್ ಉತ್ತಪ್ಪ ಹಾಗೂ ಸುಮಿ ಉತ್ತಪ್ಪ ದಂಪತಿಯ ಪುತ್ರಿ.