ನಾಪೆÇೀಕ್ಲು, ಜು. 18: ಸಮೀಪದ ನಾಲಡಿ ಗ್ರಾಮದ ಸುಮಾರು 200 ವರ್ಷಗಳ ಹಳೆಯದಾದ ಪಾಡಿ ತೋರಕಂಡಿ ಊರ ಅಂಬಲ ಕಟ್ಟಡಕ್ಕೆ ಸುಮಾರು ರೂ. 4.50 ಲಕ್ಷ ವೆಚ್ಚದಲ್ಲಿ ಮರುಕಾಯಕಲ್ಪ ನೀಡಲಾಯಿತು.
ನೂತನ ಕಟ್ಟಡವನ್ನು ಗಣಹೋಮದ ನಂತರ ಗ್ರಾಮದ ಹಿರಿಯರಾದ ಪರದಂಡ ಚಂಗಪ್ಪ ಮತ್ತು ಕೋಡಿಮಣಿಯಂಡ ಸುಬ್ರಮಣಿ ಜಂಟಿಯಾಗಿ ಉದ್ಘಾಟಿಸಿದರೆ, ಪರದಂಡ ವಿಠಲ ಭೀಮಯ್ಯ ದೀಪ ಬೆಳಗಿಸಿದರು.
ನಂತರ ‘ಶಕ್ತಿ’ಯೊಂದಿಗೆ ಮಾತನಾಡಿದ ನಾಲಡಿ ಅಜ್ಜಪ್ಪ ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೋಡಿಮಣಿಯಂಡ ಬೋಪಣ್ಣ ಶಿಥಿಲಗೊಂಡಿದ್ದ ಅಂಬಲ ಕಟ್ಟಡವನ್ನು ರೂ. 4.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿದೆ. ನಾಲಡಿ ಗ್ರಾಮಸ್ಥರು, ಪರದಂಡ ವಿಠಲ ಭೀಮಯ್ಯ, ಎಲ್ಲಾ ದಾನಿಗಳ ಸಹಕಾರ ಇದಕ್ಕೆ ಕಾರಣವಾಗಿದೆ. ನೂತನ ಕಟ್ಟಡ ನಿರ್ಮಾಣದಿಂದ ಗ್ರಾಮದಲ್ಲಿ ನಡೆಯುವ ಸಭೆ ಸಮಾರಂಭಕ್ಕೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯದರ್ಶಿ ಪೆÇನ್ನೋಲತಂಡ ತಿಮ್ಮಯ್ಯ, ಗ್ರಾಮಸ್ಥರು ಇದ್ದರು.