ಗೋಣಿಕೊಪ್ಪ ವರದಿ, ಜು. 18: ಬಿದಿರು ಬೆಳೆಯ ಬಗ್ಗೆ ಕಾರ್ಯಾ ಗಾರವು ತಾ.20 ರಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಅಂದು ಬೆಳಗ್ಗೆ 10.30 ರಿಂದ ಕಾರ್ಯಾಗಾರ ಆರಂಭ ಗೊಳ್ಳಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಬಿದಿರು ಬೆಳೆಗೆ ಸಿಗುತ್ತಿರುವ ಲಾಭದ ವಿಚಾರ, ಕೃಷಿಕೈಗೊಳ್ಳಲು ಕುರಿತು ಸಲಹೆ ನೀಡಲಾಗುತ್ತದೆ. ಆಸಕ್ತ ಕೃಷಿಕರು ಪಾಲ್ಗೊಳ್ಳಬಹುದಾಗಿದೆ ಎಂದು ಅಲ್ಲಿನ ಕೃಷಿ ತಜ್ಞ ಡಾ. ಪ್ರಭಾಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.