ವೀರಾಜಪೇಟೆ, ಜು. 18: ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರತಿವರ್ಷ ನಡೆಸುತ್ತಿರುವ ಬೇಲ್ನಮ್ಮೆಯನ್ನು ಈ ಬಾರಿ ಕದನೂರಿನ ಕೋಟೆರ ಮನು ಅವರ ಗದ್ದೆಯಲ್ಲಿ ಆಗಸ್ಟ್ 7 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಹೇಳಿದರು.ಕದನೂರು ಗ್ರಾಮ ಪಂಚಾಯಿತಿ ಯಲ್ಲಿ ಆಯೋಜಿಸಲಾಗಿದ್ದ ಬೇಲ್ನಮ್ಮೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಪೊನ್ನಪ್ಪ ಅವರು (ಮೊದಲ ಪುಟದಿಂದ) ಕೊಡಗಿನ ಆಚಾರ, ವಿಚಾರ, ಸಂಸ್ಕøತಿ, ಪದ್ಧತಿ, ಪರಂಪರೆಯನ್ನು ಬಿಂಬಿಸುವ ಸಲುವಾಗಿ ಬೇಲ್ನಮ್ಮೆಯನ್ನು ನಡೆಸಲಾಗುತ್ತಿದೆ. ಗ್ರಾಮ ಪಂಚಾಯತಿ ಸದಸ್ಯರು ಆಡಳಿತ ಮಂಡಳಿ, ಸುತ್ತಮುತ್ತಲ ಪ್ರದೇಶದ ಶಾಲಾ ಮಕ್ಕಳು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದ ಖರ್ಚುವೆಚ್ಚವನ್ನು ಆಕಾಡಮಿ ಭರಿಸುತ್ತದೆ. ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಪ್ರಮುಖವಾದುದು ಎಂದರು.ಇದೇ ಸಂದರ್ಭದಲ್ಲಿ ಕದನೂರು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯೆ ಆಲತಂಡ ಸೀತಮ್ಮ, ಕೊಡವ ಅಕಾಡಮಿ ಸದಸ್ಯರಾದ ಆಪಟ್ಟಿರ ಟಾಟುಮೊಣ್ಣಪ್ಪ, ಬೀಕಚಂಡ ಬೆಳ್ಳಿಯಪ್ಪ, ಅಜ್ಜಾಮಾಡ ಕುಶಾಲಪ್ಪ, ಚಂಗುಲಂಡ ಸೂರಜ್ ಉಪಸ್ಥಿತರಿದ್ದರು.