ನಾಪೆÇೀಕ್ಲು, ಜು. 18: ಪುಣೆಯಲ್ಲಿ ನಡೆದ 5ನೇ ರಾಷ್ಟ್ರೀಯ ನೃತ್ಯ ಚಾಂಪಿಯನ್ ಶಿಪ್ನ ಭರತನಾಟ್ಯ ಸ್ಪರ್ಧೆಯಲ್ಲಿ ಜಿಲ್ಲೆಯ ಸುರಕ್ಷಾ ವೈಲಾಯ ಪ್ರಥಮ ಸ್ಥಾನಗಳಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾದ ಈಕೆ, ಅಮ್ಮತ್ತಿ-ಒಂಟಿಯಂಗಡಿ ಗ್ರಾಮದ ಶಂಕರನಾರಾಯಣ ವೈಲಾಯ ಹಾಗೂ ಉಷಾ ಶಂಕರ್ ದಂಪತಿಯ ಪುತ್ರಿ.