ಸುಂಟಿಕೊಪ್ಪ, ಜು. 17: ಇಲ್ಲಿನ ಕಂದಾಯ ಇಲಾಖೆಯಲ್ಲಿ ಸರಕಾರ ದುರ್ಬಲ ವರ್ಗದವರಿಗೆ ನೀಡುತ್ತಿರುವ ಪಿಂಚಣಿ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಕಾಲದಲ್ಲಿ ಒದಗಿಸಿ ಕೊಡಲು ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಪವಿಭಾಗಧಿಕಾರಿ ಟಿ. ಜವರೇಗೌಡ ಹೇಳಿದರು.

ಸುಂಟಿಕೊಪ್ಪ ನಾಡಕಚೇರಿಯಲ್ಲಿ ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಅದಾಲತ್ ಕಾರ್ಯಕ್ರಮದ ಅನುಷ್ಠಾನದ ಪ್ರಗತಿ ಪರಿಶೀಲಿಸಿದ ಅವರು, ಸಂದ್ಯಾ ಸುರಕ್ಷಾ ಯೋಜನೆ, ವಿಧÀವಾ ವೇತನಾ ಯೋಜನೆ, ವಿಶೇಷಚೇತನರ ಯೋಜನೆ ಸೇರಿ 52 ಮಂದಿ ಫಲಾನುಭವಿಗಳಿಗೆ ಅರ್ಹತಾ ಪತ್ರ ವಿತರಿಸಿ ಮಾತನಾಡಿದ ಅವರು, ಸರಕಾರದ ಸವಲತ್ತುಗಳು ಫಲಾನುಭವಿಗಳಿಗೆ ಸಿಗಬೇಕು. ವೃದ್ಧಾಪ್ಯ ವೇತನ, ವಿಧವಾ ವೇತನ, ವಿಶೇಷಚೇತನರ ವೇತನ ಅರ್ಹರಿಗೆ ಸಿಗಬೇಕು. ಇದರಿಂದ ಏನಾದರೂ ಸಮಸ್ಯೆ ಇದ್ದರೆ ಫಲಾನುಭವಿಗಳು ಪ್ರತಿ ತಿಂಗಳು ನಡೆಯುವ ಅದಾಲತ್ ಕಾರ್ಯಕ್ರಮದಲ್ಲಿ ಚರ್ಚಿಸಿ ಬಗೆಹರಿಸಬಹುದು.

ಸರಕಾರದ ಯೋಜನೆ ದುರುಪಯೋಗಪಡಿಸ ಬಾರದೆಂದು ಹೇಳಿದರು. ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಕಂದಾಯ ಪರಿವೀಕ್ಷಕ ಶಿವಪ್ಪ ಗ್ರಾಮ ಲೆಕ್ಕಿಗರಾದ ನಾಗೇಶ್‍ರಾವ್, ಉಮೇಶ್, ಟಿ.ಈ. ದೇವೇಗೌಡ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್. ರವಿ, ವಿವಿಧ ಗ್ರಾಮಗಳ ಸಾರ್ವಜನಿಕರು ಹಾಜರಿದ್ದರು.