ಸೋಮವಾರಪೇಟೆ, ಜು. 17: ತಾಲೂಕು ಒಕ್ಕಲಿಗರ ಸಂಘದ ಬಿ.ಟಿ.ಸಿ.ಜಿ. ಪದವಿಪೂರ್ವ ಕಾಲೇಜಿನ ಲಿಯೋ ಕ್ಲಬ್‍ಗೆ ಲಯನ್ಸ್ ಜಿಲ್ಲಾಮಟ್ಟದ ಉತ್ತಮ ಕ್ಲಬ್ ಪ್ರಶಸ್ತಿ ದೊರೆತಿದೆ.

ಇತ್ತೀಚೆಗೆ ಮಂಗಳೂರಿನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲ ದೇವದಾಸ ಭಂಡಾರಿ ಅವರಿಂದ ಲಿಯೋ ಕ್ಲಬ್‍ನ ಪದಾಧಿಕಾರಿಗಳಾದ ಅಜಿತ್, ಪ್ರೇಮ್, ಕುಮಾರಸ್ವಾಮಿ, ಸುಮನ್ ಅವರುಗಳು ಪ್ರಶಸ್ತಿ ಸ್ವೀಕರಿಸಿದರು.