ಮಡಿಕೇರಿ, ಜು. 17: ಪೆರಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಧರಣೀಧರ ಅಧ್ಯಕ್ಷತೆಯಲ್ಲಿ ತಾ. 24 ರಂದು ಗ್ರಾಮ ಸಭೆಯು ಬೆಳಿಗ್ಗೆ 10 ಗಂಟೆಗೆ ಪಂಚಾಯಿತಿ ಸಭಾಭವನದಲ್ಲಿ ನಡೆಯಲಿದೆ.

ಈ ಸಂಬಂಧ ತಾ. 18 ರಂದು ಬೆಳಿಗ್ಗೆ 9.30 ಕ್ಕೆ ಅಮೆಚೂರು ಹಾಗೂ ಕೋಟೆ ಪೆರಾಜೆ ವಾರ್ಡ್‍ಸಭೆ ಅಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

11 ಗಂಟೆಗೆ ನಿಡ್ಯಮಲೆ, ಕುಂಡಾಡು ವಾರ್ಡ್‍ಸಭೆ ಪೆರಾಜೆ ಕೃಷಿ ಪತ್ತಿನ ಸಭಾಂಗಣದಲ್ಲಿ ಹಾಗೂ 11.30 ಕ್ಕೆ ಕುಂಬಳಚೇರಿ, ಕುಂದಲ್ಪಾಡಿ ವಾರ್ಡ್‍ಸಭೆ ನಡೆಯಲಿದೆ. ಅಪರಾಹ್ನ 3 ಗಂಟೆಗೆ ಕೆ. ಪೆರಾಜೆ ವಾರ್ಡ್‍ಸಭೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದ್ದು, ಜಿ.ಪಂ., ತಾ.ಪಂ., ಗ್ರಾ.ಪಂ. ಪ್ರತಿನಿಧಿಗಳೊಂದಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.