ಮಡಿಕೇರಿ, ಜು. 17: ವಿದ್ಯಾರ್ಥಿನಿಯೊಬ್ಬಳನ್ನು ಚುಡಾಯಿಸಿದ ಕುರಿತು; ವಿಚಾರಿಸಿದ ವೇಳೆ ಕ್ರೋಧಗೊಂಡ ಯುವಕನೋರ್ವ ತನ್ನ ಸಹಚರರೊಂದಿಗೆ ಸೇರಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಕೃತ್ಯ ಅಭ್ಯತ್‍ಮಂಗಲ ಬಳಿ ಸಂಭವಿಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು; ಆರೋಪಿಗಳಾದ ಮವಿನ್ ಹಾಗೂ ಕಿರಣ್ ಎಂಬಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ಗಾಯಾಳು ರಘು ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.