ವೀರಾಜಪೇಟೆ, ಜು. 17: ಕರಡ ಗ್ರಾಮದಲ್ಲಿ ನಿರಂತರ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಮಧುಮಾದಯ್ಯ ಎಂಬವರ ಮೂರು ಎಕರೆ ಗದ್ದೆಯನ್ನು ಸಂಪೂರ್ಣ ನಾಶ ಮಾಡಿದೆ.
ಮುಂಜಾನೆ ಎಂಟು ಆನೆಗಳ ಹಿಂಡು ನಾಟಿ ಮಾಡಲು ಸಿದ್ಧಗೊಂಡಿದ್ದ ಸಸಿ ಮಡಿಗಳನ್ನು ಸಂಪೂರ್ಣ ನಾಶಪಡಿಸಿವೆ. ಕಳೆದ ವಾರ ಅರಣ್ಯ ಇಲಾಖೆ ಆನೆ ಓಡಿಸುವ ಕಾರ್ಯ ಕೈಗೊಂಡಿತ್ತು. ಆದರೆ ಇಲಾಖೆಯ ತಂಡ ಹಿಂತಿರುಗಬೇಕಾದರೆ ಅವರ ಹಿಂದೆಯೇ ಆನೆಗಳು ನಾಡಿಗೆ ಪ್ರವೇಶಿಸಿದೆ. ಇಲಾಖೆ ಕೇವಲ ಕಣ್ಣೊರೆಸುವ ತಂತ್ರ ಮಾಡುತ್ತಿದ್ದು ಆನೆಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಯದ ವಾತಾವಾರಣದಲ್ಲಿ ಬದುಕುವ ಪರಿಸ್ಥಿತಿ ಎದುರಾಗಿದೆ ಎಂದು ಮಧುಮಾದಯ್ಯ ದೂರಿದ್ದಾರೆ.