ಮಡಿಕೇರಿ, ಜು. 17: ನೌಕೆ ಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದ ಕಟ್ಟೇರ ವಿ. ಅಯ್ಯಪ್ಪ ಇದೀಗ ಕಮಾಂಡರ್ ಆಗಿ ಬಡ್ತಿ ಹೊಂದಿದ್ದಾರೆ. ಕೊಚ್ಚಿನ್ ನೌಕಾ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟೇರ ವಿ. ಅಯ್ಯಪ್ಪ ಟಿ. ಶೆಟ್ಟಿಗೇರಿ ಗ್ರಾಮದ ಕಟ್ಟೇರ ವಿಶ್ವನಾಥ್ (ಗಣೇಶ್) ಮತ್ತು ವಿಮಲ ದಂಪತಿಯ ಪುತ್ರ.