ಚೆಟ್ಟಳ್ಳಿ, ಜು. 16: ಮಳೆಗಾಲದಲ್ಲಿ, ರಸ್ತೆ ಬದಿ, ಕಾಡಿನಲ್ಲಿ ಹಾಗೂ ತೋಟಗಳಲ್ಲಿ ಅಣಬೆಗಳು ಕಾಣ ಸಿಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಣಬೆ ಕಾಣಸಿಗುವದು ಅಪರೂಪ ವಾಗಿದೆ. ಅಣಬೆಗಳಿಗೆ ಬಾರಿ ಬೇಡಿಕೆ ಕೂಡ ಇದೆ.
ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ರಸ್ತೆ ಬದಿಯಲ್ಲಿ ವ್ಯಾಪಾರಿಗಳು ಮಾರಾಟ ಮಾಡುವ ಅಣಬೆ ಕೊಂಡುಕೊಳ್ಳಲು ತಾ ಮುಂದು ನಾ ಮುಂದು ಎಂದು ಮುಗಿಬೀಳುತ್ತಾರೆ. ಪ್ರತೀ ಕೆ.ಜಿ.ಗೆ ರೂ. 200 ನಿಂದ ರೂ. 300 ವರೆಗೆ ಅಣಬೆಯ ಬೆಲೆ ಇದೆ. ಅದೇ ರೀತಿ ವಿವಿಧ ಬಣ್ಣಗಳಲ್ಲಿ ಅಣಬೆ ಕಾಣಬಹುದು.
ನಾಪೋಕ್ಲು ಸಮೀಪದ ಎಡಪಲಾ ಲತೀಫ್ ಎಂಬವರ ತೋಟದಲ್ಲಿ ಹಾವಿನ ಆಕಾರವುಳ್ಳ ಅಣಬೆ ಕಂಡು ಬಂದಿದೆ. ಹಾವಿನ (ಮಶ್ರೂಮ್) ಅಣಬೆ ತೆಳುವಾದ ಪೇಪರ್ ಪೈಪ್ ತರ ಇದ್ದು, ಇದರ ಒಳಗಿನ ಭಾಗ ಖಾಲಿಯಾಗಿದ್ದು, ಯಾವದೇ ರೀತಿಯ ಸುವಾಸನೆ ಇಲ್ಲ ಎಂದು ಲತೀಫ್ ಹೇಳುತ್ತಾರೆ.