ಕರಿಕೆ, ಜು. 16: ಇಲ್ಲಿಗೆ ಸಮೀಪದ ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಹುಂಡೈ ಜೀನಿಯನ್ ಪಾಟ್ರ್ಸ್ ಅದ್ವೈತ ಮೋಬಿಸ್ ಬೆಂಗಳೂರು ನೀಡಿದ ಬರೆಯುವ ಪುಸ್ತಕ ಮತ್ತು ಬ್ಯಾಗ್ ಹಾಗೂ ಯುವಶಕ್ತಿ ಕ್ರೀಡಾ ಕಲಾ ಸಂಘ ಪೆರಾಜೆ ನೀಡಿದ ಸಮವಸ್ತ್ರ-ನಿಘಂಟು ವಿತರಣಾ ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷ ಜ್ಞಾನೇಶ್ ನಿಡ್ಯಮಲೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿನುತ್, ಶ್ರೀ ಶಾಸ್ತಾವು ದೇವಸ್ಥಾನದ ಮಾಜಿ ಅಧ್ಯಕ್ಷ ಪ್ರವೀಣ್ ಬಂಗಾರಕೋಡಿ, ಯುವ ಶಕ್ತಿ ಕ್ರೀಡಾ ಸಂಘದ ಅಧ್ಯಕ್ಷ ಪ್ರಸನ್ನ ನೆಕ್ಕಿಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಂಬಳಚೇರಿ ಉದಯಚಂದ್ರ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ದೊಡ್ಡಣ್ಣ ಬರೆಮೇಲು ಸ್ವಾಗತಿಸಿ, ಶಿಕ್ಷಕರಾದ ವೇಣುಗೋಪಾಲ್ ವಂದಿಸಿದರು.