ಗುಡ್ಡೆಹೊಸೂರು, ಜು. 16: ಇಲ್ಲಿನ ಕೃಷಿಪತ್ತಿನ ಸಹಕಾರ ಸಂಘದ ಶಾಖಾ ಆವರಣದಲ್ಲಿ 2012-13ನೇ ಸಾಲಿನ ಮೂಲನಿವಾಸಿ ಅಭಿವೃದ್ಧಿ ಯೋಜನೆಯಡಿ ಐ.ಟಿ.ಡಿ.ಪಿ ವತಿಯಿಂದ ಐಗೂರು ಗ್ರಾ.ಪಂ.ನ ಸಜ್ಜಳ್ಳಿ ಮತ್ತು ನಂಜರಾಯಪಟ್ಟಣ ಗ್ರಾ.ಪಂ.ನ ತಟ್ಟೆಹಳ್ಳಿಯ 25 ಮಂದಿಗೆ ತಂತಿ ಮತ್ತು ಇತರ ಸಲಕರಣೆ ನೀಡಲಾಯಿತು.

ಈ ಸಂದರ್ಭ ನಂಜರಾಯಪಟ್ಟಣ ಸಹಕಾರ ಸಂಘದ ಅಧ್ಯಕ್ಷ ಮುರುಳಿಮಾದಯ್ಯ, ಮತ್ತು ನಿರ್ದೇಶಕರಾದ ಆರ್.ಕೆ. ಚಂದ್ರ, ದಾದಪ್ಪ, ಬಿ.ಎಸ್. ಕಾಶಿ, ಧನಪಾಲ್, ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ ಹಾಗೂ ಲ್ಯಾಂಪ್ಸ್ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಎ. ಗಂಗಾಧರ. ಪಿ.ಬಿ. ಅಶೋಕ (ನಂದ) ಹಾಜರಿದ್ದರು.