ಶನಿವಾರಸಂತೆ, ಜು. 15: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ದೊಡ್ಡ ಬಿಳಾಹ, ಕಿರಿಬಿಳಾಹ, ಮಾದ್ರೆ, ಬೆಂಬಳೂರು ಗ್ರಾಮಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಹರ್ಷಚಿತ್ತರಾಗಿದ್ದಾರೆ. ಕೃಷಿ ಚಟುವಟಿಕೆ ಚುರುಕು ಕಂಡಿದೆ. ಗದ್ದೆಗಳಲ್ಲಿ ಉಳುಮೆ, ಬಿತ್ತನೆ ಬೀಜದ ಅಗೆ ಹಾಕುವ ಕೆಲಸ ಉತ್ಸಾಹದಿಂದ ಸಾಗಿದೆ. ಬುಧವಾರ ಅರ್ಧ ಇಂಚು ಮಳೆಯಾಗಿದೆ. ಈವರೆಗೆ ಒಟ್ಟು 17 ಇಂಚಿಗೂ ಅಧಿಕ ಮಳೆಯಾಗಿದೆ. ಕೆಲವೆಡೆ ಸಸಿಮಡಿ ಸಿದ್ಧವಾಗಿದ್ದು, 15 ದಿನಗಳೊಳಗೆ ನಾಟಿ ಮಾಡುವ ಸಿದ್ಧತೆ ನಡೆದಿದೆ.