ಕೂಡಿಗೆ, ಜು, 16: ‘ಶಕ್ತಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ಮನೆಯೂ ಇಲ್ಲ..., ಫಸಲು ನೀಡುತ್ತಿದ್ದ ತೆಂಗೂ ಇಲ್ಲ...! ಎಂಬ ವರದಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸ್ಪಂದಿಸಿದ್ದಾರೆ.

ದೂರವಾಣಿಯ ಮೂಲಕ ತಮ್ಮ ಆಪ್ತ ಸಹಾಯಕರಿಂದ ಮಾಹಿತಿ ಪಡೆದು ನಂತರ ತಾಲೂಕು ಕಾರ್ಯನಿರ್ವಹಣಾಧಿಕಾರಿಯವರಿಗೆ ವಸತಿ ರಹಿತ ಕುಟುಂಬಕ್ಕೆ ಮನೆ ನೀಡುವಂತೆ ಸೂಚಿಸಿದ್ದಾರೆ. ಅದರನ್ವಯ ಶಾಸಕರ ಆಪ್ತ ಕಾರ್ಯದರ್ಶಿ ಈ ಬಗ್ಗೆ ಕಾರ್ಯ ನಿರ್ವಹಣಾಧಿಕಾರಿಯವರೊಂದಿಗೆ ಪತ್ರ ವ್ಯವಹಾರ ನಡೆಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಸುನೀಲ್‍ಕುಮಾರ್ ಅವರು ಕೂಡಿಗೆ ಗ್ರಾ. ಪಂ. ನಿಂದ ಸಂಧ್ಯಾ ಅವರು ನೀಡಿರುವ ಅರ್ಜಿಯ ಬಗ್ಗೆ ಮಾಹಿತಿ ಪಡೆದು, ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದ್ದಾರೆ.