ವೀರಾಜಪೇಟೆ, ಜು. 16: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. 29 ರಂದು ಅರಮೇರಿ ಕಳಂಚೇರಿ ಮಠದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಮಠದ ಸಭಾಂಗಣದಲ್ಲಿ ತಾಲೂಕು ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಧೋಶ್ ಪೂವಯ್ಯ ಮಾತನಾಡಿ, ಅಂದು ಪೂರ್ವಾಹ್ನ ಬೆಳಿಗ್ಗೆ 7.30 ಗಂಟೆಗೆ ಧ್ವಜಾರೋಹಣ. 9 ಗಂಟೆಗೆ ವೀರಾಜಪೇಟೆ-ಮಡಿಕೇರಿ ಮುಖ್ಯರಸ್ತೆಯಿಂದ ಮಠದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಬಳಿಕ 10.30ಕ್ಕೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ವೇದಿಕೆ ಹಾಗೂ ಸಭಾ ಕಾರ್ಯಕ್ರಮಗಳ ಚಿತ್ರಣದ ಬಗ್ಗೆ ವಿವರಣೆ ನೀಡಿದರು.
ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಭೆಯ ಸಾನ್ನಿಧ್ಯ ವಹಿಸಿ ಸಮ್ಮೇಳನದ ಸಿದ್ದತೆÀಗಳ ಬಗ್ಗೆ ವಿವರಣೆ ಪಡೆದುಕೊಂಡು ಸ್ಥಳೀಯ ಪ್ರಮುಖರು ಹಾಗೂ ಪ್ರತಿಭೆಗಳಿಗೆ ಅವಕಾಶ ನೀಡಿದರೆ ಸಮಾಜ ಅವರನ್ನು ಗುರುತಿಸಿದಂತಾಗುತ್ತದೆ ಎಂದು ಹೇಳಿದರು.
ಲಿಂಗೈಕ್ಯ ಶಾಂತಮಲ್ಲಸ್ವಾಮಿ ಮುಖ್ಯ ದ್ವಾರ, ಕಾರ್ಗಿಲ್ ಯೋಧ ಪೆಮ್ಮಂಡ ಕಾವೇರಪ್ಪ ದ್ವಾರ , ಸ್ವಾತಂತ್ರ್ಯ ಹೋರಾಟಗಾರ ಕೂವಲೇರ ಸೂಫಿ, ಜನಪದ ವೀರ ಮಹಿಳೆ ಅಳಮಂಡ ದೊಡ್ಡವ್ವ, ಸಾಹಿತಿ ಪುಗ್ಗೆರ ಕರಂಬಯ್ಯ ಪುಸ್ತಕ ಮಳಿಗೆ, ಮಹಾಂತಪ್ಪ ಸ್ವಾಮಿ ಸಭಾಂಗಣ, ಸೋಮಶೇಖರಸ್ವಾಮಿ ಮುಖ್ಯ ವೇದಿಕೆಗಳನ್ನು ನಿರ್ಮಿಸುವಂತೆ ತೀರ್ಮಾನಿಸಲಾಯಿತು. ಅರಮೇರಿ ಕಳಂಚೇರಿ ಮಠದ ಸ್ಥಾಪಕ ಗುರುಗಳಾದ ರಾಜಶೇಖರ ಸ್ವಾಮೀಜಿ ಹೆಸರಿಡುವ ಬಗ್ಗೆ ನಿರ್ಧರಿಸಲಾಯಿತು.
ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ ಸ್ವಸಹಾಯ ಸಂಘ, ಧರ್ಮಸ್ಥಳ ಸಂಘಟನೆಗಳು ಸ್ತ್ರೀ ಶಕ್ತಿ ಸಂಘಗಳುÀ ಸ್ಥಳೀಯ ಗ್ರಾಮ ಪಂಚಾಯಿತಿಗಳ ಸಹಕಾರ ಕೋರಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವಂತೆ ವಿನಂತಿಸಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀsಶೈಲ ಬಿಳಗಿ, ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ತಾಲೂಕು ಪಂಚಾಯಿತಿ ಸದಸ್ಯ ಆಲತಂಡ ಸೀತಮ್ಮ, ಬಲ್ಲಚಂಡ ಕುಸುಂ, ಸಾಹಿತ್ಯ ಪರಿಷತ್ನ ಗೌರವ ಕಾರ್ಯದರ್ಶಿ ಸುಬ್ರಮಣಿ, ಬಡಕಡ ರಜಿತಾ ಕಾರ್ಯಪ್ಪ , ನಳಿನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.