ಕುಶಾಲನಗರ, ಜು. 16: ಕನ್ನಡ ಸಾಹಿತ್ಯ ಪರಿಷತ್‍ನ ಕುಶಾಲನಗರ ತಾಲೂಕು ಘಟಕದ ನೂತನ ಸಮಿತಿ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ತಾ. 18 ರಂದು ಕುಶಾಲನಗರದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷರಾದ ಬಿ.ಎಸ್. ಲೋಕೇಶ್‍ಸಾಗರ್ ತಿಳಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕುಶಾಲನಗರ ಪ್ರತ್ಯೇಕ ತಾಲೂಕಾಗಿ ರಚನೆಗೊಂಡ ಹಿನ್ನೆಲೆಯಲ್ಲಿ ನೂತನ ತಾಲೂಕು ಘಟಕವನ್ನು ರಚಿಸಲಾಗಿದೆ. ಕುಶಾಲನಗರ ಹೋಬಳಿ ಘಟಕವನ್ನು ತಾಲೂಕು ಘಟಕವಾಗಿ ರೂಪಿಸಲಾಗಿದ್ದು, ಈ ಹಿಂದೆ ಹೋಬಳಿ ಘಟಕದ ಅಧ್ಯಕ್ಷರಾಗಿದ್ದ ಎಂ.ಡಿ. ರಂಗಸ್ವಾಮಿ ತಾಲೂಕು ಘಟಕದ ನೂತನ ಸಮಿತಿಯ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ತಾ. 18 ರಂದು ನೂತನ ಘಟಕಕ್ಕೆ ಅಧಿಕಾರ ಹಸ್ತಾಂತರಿಸಲಾಗುವದು.

ನೂತನ ತಾಲೂಕು ರಚನೆಗೊಳ್ಳಲು ಹೋರಾಟ ನಡೆಸಿದ ಐವರು ಪ್ರಮುಖರನ್ನು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಗೌರವಿಸಲಾಗುವದು ಎಂದು ಅವರು ತಿಳಿಸಿದರು.

ನೂತನ ತಾಲೂಕು ಘಟಕದ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿ, ನೂತನ ಘಟಕದ ಅಧಿಕಾರ ಸ್ವೀಕಾರ ಸಮಾರಂಭ ತಾ. 18 ರಂದು ಸ್ಥಳೀಯ ಕನ್ನಿಕಾ ಸಭಾಂಗಣದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ. ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಉದ್ಘಾಟಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಕಸಾಪ ನಿರ್ದೇಶಕರಾದ ಪಿಲಿಪ್‍ವಾಸ್, ಕೆ.ಕೆ. ನಾಗರಾಜಶೆಟ್ಟಿ, ತಾಲೂಕು ಘಟಕದ ಕಾರ್ಯದರ್ಶಿ ಎನ್.ಆರ್. ನಾಗೇಶ್ ಇದ್ದರು.