ಮಡಿಕೇರಿ, ಜು. 15: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ, ರೈತರಿಗೆ ವಾರ್ಷಿಕ 3 ಕಂತುಗಳಲ್ಲಿ 6 ಸಾವಿರ ರೂಪಾಯಿ ಸಹಾಯಧನ ಲಭಿಸಲಿದ್ದು, ಈ ಸಂಬಂಧ ಹೆಸರು ನೋಂದಾಯಿಸಿಕೊಳ್ಳಲು ತಾ. 31ರ ತನಕ ಅವಧಿ ವಿಸ್ತರಿಸಲಾಗಿದೆ.ಜಿಲ್ಲೆಯಲ್ಲಿ ಈಗಾಗಲೇ 38 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ತಾ. 31ರ ತನಕ ಮತ್ತೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ. ಅಲ್ಲದೆ ಈ ಹಣ ನೇರವಾಗಿ ಕೇಂದ್ರದಿಂದ ರೈತರ ಬ್ಯಾಂಕ್ ಖಾತೆಗಳಿಗೆ ಸಂದಾಯವಾಗಲಿದ್ದು, ಕಂದಾಯ ಇಲಾಖೆ ಮೂಲಕ ಕೇಂದ್ರಕ್ಕೆ ರೈತರ ಅರ್ಜಿಗಳನ್ನು ರವಾನಿಸಲಾಗುವದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.