ಮಡಿಕೇರಿ, ಜು. 15: ಬಿಟ್ಟಂಗಾಲದ ದೇವಯ್ಯ ಮೆಮೋರಿಯಲ್ ಪ್ರಿಪರೇಟರಿ ಸ್ಕೂಲ್ನ ಐದನೇ ತರಗತಿಯ ವಿದ್ಯಾರ್ಥಿಗಳು ನಿನ್ನೆ ತಮ್ಮ ಶಾಲೆಯ ಬಳಿ ನಾಟಿ ಕೃಷಿಯಲ್ಲಿ ಪ್ರತ್ಯಕ್ಷ ತೊಡಗಿಸಿಕೊಂಡಿದ್ದರು.
ಈ ಶಾಲೆಯಲ್ಲಿ ಕೊಡಗಿನ ಆಚಾರ, ವಿಚಾರ, ಪರಂಪರೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವದರೊಂದಿಗೆ; ಹುತ್ತರಿ ಹಬ್ಬದಲ್ಲಿ ಕದಿರು ತೆಗೆಯುವ ಪದ್ಧತಿಯ ಸಲುವಾಗಿ ಭತ್ತದ ನಾಟಿ ಕಾಯಕವನ್ನು ರೂಢಿಗೊಳಿಸಲಾಗಿದೆ ಎಂದು ಶಾಲಾ ಶಿಕ್ಷಕರು ತಿಳಿಸಿದ್ದಾರೆ. ಆ ದಿಸೆಯಲ್ಲಿ ನಿನ್ನೆ 16 ವಿದ್ಯಾರ್ಥಿಗಳ ತಂಡ ಗದ್ದೆ ನಾಟಿಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ಪ್ರತ್ಯಕ್ಷ ಪಾಲ್ಗೊಂಡಿದ್ದಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.