ಶ್ರೀಮಂಗಲ, ಜು. 15: ಪೆÇನ್ನಂಪೇಟೆಯ ಅಪ್ಪಚ್ಚಕವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಲಚೀರ ಆಶಾ ಗಣೇಶ್, ಮೈಸೂರಿನ ವಿಶ್ವ ಪ್ರಜ್ಞಾ ಕಾಲೇಜಿನ ಡೀನ್ ಡಾ. ಮೋಹನ್ಕುಮಾರ್, ಉಪನ್ಯಾಸಕ ನವೀನ್ ಕುಮಾರ್ ಉಪಸ್ಥಿತರಿದ್ದರು.
ಪೆÇನ್ನಂಪೇಟೆಯ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಕಾರ್ಯದರ್ಶಿ ಪೆÇನ್ನಿಮಾಡ ಸುರೇಶ್, ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಮಂಡಚಂಡ ದಿನೇಶ್ ಚಿಟ್ಟಿಯಪ್ಪ, ಕಾರ್ಯದರ್ಶಿ ಮೂಕಳಮಾಡ ಅರಸು ನಂಜಪ್ಪ, ಖಜಾಂಚಿ ಅಪ್ಪಂಡೇರಂಡ ಶಾರದ, ಸದಸ್ಯೆ ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ನಾಯಕ ಮಲಚೀರ ವರುಣ್ ಉತ್ತಯ್ಯ, ಉಪನಾಯಕ ಮಾಚಿಮಾಡ ಧನುಷ್ ಚಂಗಪ್ಪ, ಶಿಸ್ತಿನ ನಾಯಕಿಯಾಗಿ ನೂರೇರ ಲಾಜ್ ಮುತ್ತಮ್ಮ, ಉಪನಾಯಕಿಯಾಗಿ ಹೊಟ್ಟೆಂಗಡ ಸÀಹಾನ್ ಸೋಮಣ್ಣ, ಸಾಂಸ್ಕೃತಿಕ ನಾಯಕಿಯಾಗಿ ಚಿರಿಯಪಂಡ ಮನೀಷಾ ಲಕ್ಷ್ಮಿ, ಉಪನಾಯಕಿ ಯಾಗಿ ಪುದಿಯೊಕ್ಕಡ ರೇಷ್ಮ, ಕ್ರೀಡಾ ನಾಯಕನಾಗಿ ಮೊಹಮ್ಮದ್ ಸಾಬೀತ್, ಉಪನಾಯಕಿಯಾಗಿ ಪೆಮ್ಮಂಡ ದೀಕ್ಷಿತಾ, ಆರೋಗ್ಯ ಸಚಿವರಾಗಿ ಚಿರಿಯಪಂಡ ಟೀನಾ, ಉಪ ಸಚಿವರಾಗಿ ಮಲಚೀರ ಸೀತಮ್ಮ ಆಯ್ಕೆಯಾದರು.