ಸೋಮವಾರಪೇಟೆ, ಜು.15: ಪಟ್ಟಣದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 17ನೇ ವರ್ಷದ ರಾಮಾಯಣ ಮಾಸದ ಆಟಿ (ಕರ್ಕಾಟಕ/ ಆಷಾಡ) ತಿಂಗಳ ದುರ್ಗಾ ದೀಪ ನಮಸ್ಕಾರ ಪೂಜೆ ತಾ.17 ರಿಂದ ಆ. 15ರವರೆಗೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ತಿಳಿಸಿದ್ದಾರೆ. ತಾ. 17ರ ಬೆಳಿಗ್ಗೆ ಗಣಪತಿ ಹೋಮ ದೊಂದಿಗೆ ಪ್ರಸಕ್ತ ವರ್ಷದ ಪೂಜೋತ್ಸವ ಆರಂಭಗೊಳ್ಳಲಿದ್ದು, ಅಂದಿನಿಂದ ಆಗಸ್ಟ್ 14ರ ಬುಧವಾರದವರೆಗೆ ಪ್ರತಿನಿತ್ಯ ಸಂಜೆ 6 ಗಂಟೆಯಿಂದ 8.30ರವರೆಗೆ ದುರ್ಗಾ ದೀಪ ನಮಸ್ಕಾರ ಪೂಜೆಗಳು ಅರ್ಚಕರುಗಳಾದ ಮಣಿಕಂಠನ್ ನಂಬೂಧರಿಯವರ ಪೌರೋಹಿತ್ಯದಲ್ಲಿ ನಡೆಯಲಿದೆ.
ಆ. 1 ರಂದು ಸಂಜೆ ಶತ್ರು ಸಂಹಾರ ಪೂಜೆ, ಆ.5ರಂದು ಬೆಳಗ್ಗೆ ನಾಗರ ಪಂಚಮಿಯ ಪ್ರಯುಕ್ತ ವಿಶೇಷ ಪೂಜೆ, ಆ.10ರಂದು ಸಂಜೆ ನಿರಾಂಜನ ಸೇವೆಗಳು ನಡೆಯಲಿವೆ. ಆಟಿ ಮಾಸಾಂತ್ಯದ ಕೊನೆಯ ದಿನವಾದ ಆಗಸ್ಟ್ 15ರಂದು ಬೆಳಿಗ್ಗೆ 9 ಗಂಟೆಯಿಂದ ಕಾಳೇಘಾಟ್ ಶ್ರೀ ನಾರಾಯಣನ್ ತಂತ್ರಿಗಳ ಪೌರೋಹಿತ್ಯದಲ್ಲಿ ಶ್ರೀ ಭುವನೇಶ್ವರಿ ದೇವಿಯ ಮೂಲಮಂತ್ರ ಹೋಮ ನಡೆಯಲಿದೆ.ದುರ್ಗಾದೀಪ ನಮಸ್ಕಾರ ಪೂಜೆ, ಭುವನೇಶ್ವರಿ ದೇವಿಯ ಮೂಲಮಂತ್ರ ಹೋಮದ ಸೇವಾರ್ಥಕ್ಕೆ ಭಕ್ತಾಧಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಸೇವಾರ್ಥ ಬಯಸುವವರು ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9964996895 ಅಥವಾ 9448585509ನ್ನು ಸಂಪರ್ಕಿಸುವಂತೆ ದೇವಾಲಯ ಸಮಿತಿ ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ತಿಳಿಸಿದ್ದಾರೆ.