ಸಿದ್ದಾಪುರ, ಜು. 15: ವೀರಾಜಪೇಟೆ ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಸಮಾವೇಶ ಅಮ್ಮತ್ತಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಸಂಘದ ಹೋರಾಟದಿಂದಾಗಿ ವೇತನ ಹೆಚ್ಚಳ, ಬಡ್ತಿ ಮುಂತಾದ ಸೌಲಭ್ಯಗಳು ದೊರೆತಿವೆ. ಸಂಘಟನೆ ಮೂಲಕ ಮತ್ತಷ್ಟು ಸೌಲಭ್ಯಗಳನ್ನು ಸರಕಾರದಿಂದ ಪಡೆಯಬೇಕು ಎಂದರು.

ಸಮಾವೇಶದಲ್ಲಿ ನೂತನ ಕಾರ್ಯಕಾರಿಣಿ ಸಮಿತಿಯ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಜಾನಕಿ, ಉಪಾಧ್ಯಕ್ಷರಾಗಿ ಮಹದೇವ, ಹರೀಶ್, ಕಾರ್ಯದರ್ಶಿಯಾಗಿ ನವೀನ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಹರೀಶ್ ಹಾಗೂ ಮಂಜುನಾಥ್, ಖಜಾಂಚಿಯಾಗಿ ಅಕ್ಕಮ್ಮ ಅವರನ್ನು ಆಯ್ಕೆ ಮಾಡ ಲಾಯಿತು. ಈ ಸಂದರ್ಭ ಮುಂಬಡ್ತಿ ಹೊಂದಿದ ಸಿದ್ದಾಪುರದ ಮುತ್ತುಪಾಂಡಿ, ಮಾಲ್ದಾರೆಯ ನಂದ, ಕದನೂರುವಿನ ರವಿ ಅವರನ್ನು ಸನ್ಮಾನಿಸಲಾಯಿತು.