(ನಿನ್ನೆಯ ಸಂಚಿಕೆಯಿಂದ)
ಗಣಿತದ ಕುರಿತು ಮಕ್ಕಳಲ್ಲಿ ಕಂಡುಬರುವ ಹತಾಶೆ, ಭಯದ ಹಿಂದಿನ ಕಾರಣಗಳನ್ನು ಹುಡುಕಲು ಹೊರಟರೆ, - ಮಕ್ಕಳಿಗೆ ಗಣಿತ ಅಥವಾ ಗಣಿತ ಶಿಕ್ಷಕರೆಡೆಗೆ ಇಲ್ಲದಿರುವ ಒಲವು ಅಥವಾ ಆ ಬಗೆಗಿನ ಭಯ, ಗಣಿತ ವಿಷಯದ ಕಠಿಣತೆಯ ಕುರಿತು ಹಿರಿಯರಿಂದ, ಶಿಕ್ಷಕರಿಂದ, ಪೋಷಕರಿಂದ ಪಡೆದ ಕಲ್ಪನಾತ್ಮಕ ಮಾತುಗಳು, ವರ್ತನೆಗಳು ಹಾಗೂ ಇದರ ಕುರಿತಾಗಿ ಮಕ್ಕಳು ತಮ್ಮ ನಿಲುವನ್ನು ತಿಳಿಯುವಲ್ಲಿ ವಿಫಲರಾಗುವದು ಅತೀ ಮುಖ್ಯ ಕಾರಣಗಳಾಗಿ ಕಂಡುಬರುತ್ತವೆ. ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಮಯದಲ್ಲಿ ಕಲಿಯುವ ಬೇಸಿಕ್ ಗಣಿತವೇ ಅವರ ಮುಂದಿನ ಜೀವನದಲ್ಲಿ ಯಾವದೇ ಪ್ರವೇಶ ಪರೀಕ್ಷೆಗಳಲ್ಲಾಗಲಿ ಅಥವಾ ಹೆಚ್ಚಿನ ವಿದ್ಯಾಭ್ಯಾಸದ ದೃಷ್ಠಿಯಲ್ಲೇ ಆಗಲಿ ತನ್ನ ಪ್ರಾಮುಖ್ಯತೆಯನ್ನು ಹೊಂದಿದೆ. ಆದುದರಿಂದ ಈ ಸಮಯದಲ್ಲಿ ಕಲಿಯುವ ಕಲಿಕೆಯು ಸರಳವಾಗಿ ಸರಾಗವಾಗಿ ಇದ್ದರೆ ಮಕ್ಕಳಿಗೆ ಅದರ ಬಳಕೆಯು ಸುಲಭವಾಗಿರುತ್ತದೆ. ಆದರೆ, ಮಕ್ಕಳ ಮನಸಿನಲ್ಲಿರುವ ಗಣಿತದ ಕಠಿಣತೆಯ ಕುರಿತಾದ ಭಾವನೆಯನ್ನು ಹೋಗಲಾಡಿಸಬೇಕು. ಇಲ್ಲವಾದಲ್ಲಿ ಮುಂದಿನ ವಿದ್ಯಾಭ್ಯಾಸದ ದಿನಗಳಲ್ಲಿ ವಿದ್ಯಾರ್ಥಿಗಳು ಮಾಡುವ ಲೆಕ್ಕಗಳಲ್ಲಿನ ಚಿಕ್ಕ ಪುಟ್ಟ ತಪ್ಪುಗಳಿಂದ ಹೆಚ್ಚಿನ ಅಂಕಗಳನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. ಅಲ್ಲದೆ, ಗಣಿತ ಸಂಬಂಧಿತ ಇತರೆ ವಿಷಯಗಳಲ್ಲಿಯೂ ಅಸಫಲತೆಯನ್ನು ಹೊಂದುತ್ತಾರೆ. ಹಾಗಾದರೆ ಗಣಿತವನ್ನು ಕಬ್ಬಿಣದ ಕಡಲೆಯಲ್ಲ ಎಂಬಂತೆ ಭಾಸವಾಗುವಂತೆ ಮಾಡುವದಾದರೂ ಹೇಗೆ? ಅತಿಯಾದ ಸುಲಭ, ಸರಳ ಮಾರ್ಗದಲ್ಲಿ ಗಣಿತವನ್ನು ಅಭ್ಯಾಸ ಮಾಡುವದಾದರೂ ಹೇಗೆ? ಈ ಪ್ರಶ್ನೆಗಳಿಗೆ ನಮ್ಮ ವೇದ ಗಣಿತದಲ್ಲಿ ಉತ್ತರವಿದೆ.
ವೇದ ಗಣಿತ.. ಏನನಿದು ವೇದ ಗಣಿತ? ವೇದಗಳಲ್ಲಿ ಗಣಿತ ಇರುವದೇ? ಹೌದು, ನಮ್ಮ ಪ್ರಾಚೀನ ಪವಿತ್ರ ಗ್ರಂಥಗಳಾದ ವೇದಗಳಲ್ಲಿ ಇರುವ ಶ್ಲೋಕಗಳಲ್ಲಿ ಅಡಗಿರುವ ಗಣಿತದ ಸೂತ್ರಗಳನ್ನು ಬಳಸಿಕೊಂಡು ನಮ್ಮ ಶೈಕ್ಷಣಿಕ ಗಣಿತವನ್ನು ಸರಳ ಸುಲಭ ವಿಧಾನಗಳಲ್ಲಿ ಬಗೆಹರಿಸಿ ಉತ್ತಮ ಫಲಿತಾಂಶಗಳನ್ನು ಪಡೆಯಯಬಹುದಾಗಿ, ಹೆಚ್ಚಿನ ಅಂಕಗಳನ್ನು ಪಡೆಯಬಹುದಾಗಿದೆ ಎಂಬದು ಹಲವಾರು ಸಂಶೋಧನೆಗಳ ಮುಖೇನ ಸಾಬೀತಾಗಿದೆ.
ಹಾಗಿದಲ್ಲಿ ವೇದಗಣಿತ ಏನೆಂಬುದನ್ನು ತಿಳಿಯೋಣ. ಈ ವೇದ ಗಣಿತವು ತನ್ನ ಮೂಲವನ್ನು ಕ್ರಿ.ಪೂ. 500 ವರ್ಷಗಳ ಹಿಂದೆ ರಚಿಸಲಾದ ವೇದಗಳಲ್ಲಿ ಹೊಂದಿದೆ. ಆದರೆ, ನಮ್ಮ ಭಾರತೀಯ ಗಣಿತಜ್ಞರಾದ ಜಗದ್ಗುರು ಶ್ರೀ ಭಾರತೀ
ಕೃಷ್ಣ ತೀರ್ಥಜೀ ಇವರು ಕ್ರಿ.ಶ. 1911ರಿಂದ 1918ರವರೆಗೆ ತಮ್ಮ ಸಂಸ್ಕø್ರತ ಮತ್ತು ಗಣಿತ ಕುರಿತಾದ ಅಧ್ಯಯನ ಸಮಯದಲ್ಲಿ ವೇದಗಳನ್ನು ಕುರಿತು ಕಾರ್ಯ ನಿರ್ವಹಿಸುವಾಗ ಹಲವಾರು ಗಣಿತ ಸಂಭಂದಿತ ಸೂತ್ರಗಳನ್ನು ಮರುಶೋಧಿಸಿದರು.
ನಂತರ ಅವುಗಳ ಅರ್ಥ, ಮಹತ್ವ ಮತ್ತು ಉಪಯುಕ್ತತೆಗಳ ಕುರಿತು ಅಧ್ಯಯನ ನಡೆಸಿ, ಅವುಗಳಿಗೆ ಈಗಿನ ಕಾಲಕ್ಕೆ ತಕ್ಕಂತೆ ಅಳವಡಿಕೆ ಮಾಡಿಕೊಳ್ಳುವಂತೆ ಮರುಹುಟ್ಟು ನೀಡಿ, ಇಂದಿನ ಶೈಕ್ಷಣಿಕ ಅವಸ್ಥೆಯಲ್ಲಿ ಉಪಯೋಗವಾಗುವಂತೆ ನಿಯಮಾನುಸಾರ ಸೂತ್ರಗಳನ್ನು ರೂಪಿಸಿದರು.
ನಂತರ ಮುಂದಿನ ವರ್ಷಗಳಲ್ಲಿ ಅಂದರೆ, ಕ್ರಿ.ಶ. 1965ರಲ್ಲಿ ಸ್ವಾಮೀಜಿಯವರ ಶೋಧನೆಗಳನ್ನು ಪುಸ್ತಕದ ರೂಪದಲ್ಲಿ ಹೊರತರಲಾಯಿತು. ಸ್ವಾಮೀಜಿಯವರ ಈ ಪುಸ್ತಕದಲ್ಲಿ ಮನಸ್ಸಿನಲ್ಲಿ ಲೆಕ್ಕ ಮಾಡುವ ಹಲವಾರು ವಿಧಾನಗಳನ್ನು ತಿಳಿಸಿದ್ದು, ಈ ವಿಧಾನಗಳು ವೇದಗಳಲ್ಲಿ ಇರುವ ಶ್ಲೋಕಗಳಲ್ಲಿ ಬರುವ ಸೂತ್ರಗಳನ್ನು ಅವಲಂಭಿತವಾಗಿವೆ. ಆದ ಕಾರಣ ಇದನ್ನು ವೇದಗಣಿತ ಎಂದು ಕರೆಯಲಾಗಿದೆ. ತೀರ್ಥಜೀ ಅವರು ತಮ್ಮ ಶೋಧನೆಯ ನಂತರದ ದಿನಗಳಲ್ಲಿ ವೇದಗಣಿತ ಕುರಿತು ಹಲವಾರು ಉಪನ್ಯಾಸಗಳು, ತರಗತಿಗಳನ್ನು ನಡೆಸಿ ಇದರ ಕುರಿತಾದ ಮಾಹಿತಿ, ಮಹತ್ವ ಮತ್ತು ಇದರ ಉಪಯುಕ್ತತೆಯನ್ನು ಪಸರಿಸುವಲ್ಲಿ ಸಫಲರಾದರು.
ವೇದ ಗಣಿತವು ಶೈಕ್ಷಣಿಕ ಗಣಿತವನ್ನು ಸುಲಭ, ಸರಳ ವಿಧಾನದಲ್ಲಿ ವೇಗವಾಗಿ ಬಗೆಹರಿಸಲು ಸಹಕರಿಸುವುದು. ಇದು ಕೇವಲ 16 ಸೂತ್ರಗಳು ಮತ್ತು 15 ಉಪ ಸೂತ್ರÀಗಳನ್ನು ಒಳಗೊಂಡಿದೆ. ಈ ಸೂತ್ರಗಳು ವiನಸ್ಸಿನಲ್ಲೇ ಲೆಕ್ಕಮಾಡಲು ಅನುವಾಗುತ್ತವೆ. ಅಲ್ಲದೆ ಈ ಸೂತ್ರಗಳನ್ನು ಅಂಕಗಣಿತ ಮಾತ್ರವಲ್ಲದೆ ಬೀಜಗಣಿತ, ರೇಖಗಣಿತ, ಟ್ರಿಗ್ನೋಮಿಟ್ರಿ (), ಕ್ಯಾಲ್‍ಕುಲಸ್ (), ಇತ್ಯಾದಿ.. ವಿಭಾಗದ ಲೆಕ್ಕಗಳನ್ನೂ ಕೂಡ ಬಗೆಹರಿಸಬಹುದಾಗಿದೆ.
ಈ ಸೂತ್ರಗಳು ನಮ್ಮ ಲೆಕ್ಕಗಳನ್ನು ಸಾಂಪ್ರದಾಯಿಕ ವಿಧಾನಕ್ಕಿಂತಲೂ ಸರಿಸುಮಾರು 15 ಪಟ್ಟು ವೇಗವಾಗಿ, ಅತೀ ಕಡಿಮೆ ಸಮಯದಲ್ಲಿ ಮಾಡಬಹುದಾಗಿದೆ. ಹಾಗೂ ಈ ವಿಧಾನಗಳಿಂದ ವಿದ್ಯಾರ್ಥಿಗಳು ಒಂದೇ ಸಾಲಿನಲ್ಲಿ ಉತ್ತರಿಸುವುದಲ್ಲದೆ, ಶೇ. 100 ಸರಿ ಉತ್ತರವನ್ನು ನೀಡಬಹುದು. ಹಾಗಾಗಿ ಈ ವಿಧಾನಗಳನ್ನು ಬಳಸುವ ಮಕ್ಕಳಲ್ಲಿ ಲೆಕ್ಕ ಮಾಡುವ ವೇಗ, ನಿಖರತೆಯನ್ನು ವೃದ್ಧಿಸುವದಲ್ಲದೆ, ವಿದ್ಯಾರ್ಥಿಗಳಲ್ಲಿ ಗಣಿತ ಸಮಸ್ಯೆಗಳನ್ನು, ಲೆಕ್ಕಗಳನ್ನು ಬಗೆಹರಿಸುವಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ. ಜೊತೆಗೆ ತರ್ಕಬದ್ದವಾಗಿ ಚಿಂತಿಸುವ ಕೌಶಲ್ಯವನ್ನು ವೃದ್ಧಿಸುತ್ತದೆ. ತಾರ್ಕಿಕ ಚಿಂತನೆಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವ ಪರಿಕಲ್ಪನೆಯನ್ನು ಬೆಳೆಸುತ್ತದೆ.
ವೇದ ಗಣಿತವು ನಮ್ಮ ಪೂರ್ವಜರ ಕಾಲದಿಂದಲೂ ವಿದ್ಯಾರ್ಥಿಗಳ ಬಳಕೆಯಲ್ಲಿದ್ದು ತನ್ನ ಅನನ್ಯ ಸೇವೆಯನ್ನು ನೀಡುತ್ತಿದೆ. ಇದು ಅತ್ಯದ್ಬುತ ಪರಿಣಾಮಕಾರಿ ಪ್ರಯೋಜನಗಳನ್ನು ಹೊಂದಿದ್ದು, ಕಲಿಯುವವರಿಗೆ ಅಳವಡಿಸಿಕೊಳ್ಳಲು ಸುಲಭವಾದ ವಿಧಾನವಾಗಿದೆ.