ಮಡಿಕೇರಿ ನಗರಸಭಾ ಆಯುಕ್ತರೇ, ಈ ಬಾರಿಯ ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ತೀರಾ ಗೊಂದಲವಿದೆ; ಹಲವರಿಗೆ ಶೇಕಡಾ 300 ರಷ್ಟು ಹೆಚ್ಚುವರಿ ಆಗಿದೆ; ವಾಣಿಜೋದ್ಯಮಿಗಳು, ವ್ಯಾಪಾರಿಗಳಿಗೂ ತೊಂದರೆಯಾಗಿದೆ ಎಂದು ಸುಮಾರು 2 ತಿಂಗಳ ಹಿಂದೆಯೇ ನಿಮ್ಮ ಗಮನಕ್ಕೆ ತಂದಿದ್ದೆ. ನಿಮಗೂ, ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳಿಗೂ ನಾಗರಿಕರ ಪರವಾಗಿ ಲಿಖಿತ ದೂರು ನೀಡಿದ್ದೆ. ಆಡಳಿತಾಧಿಕಾರಿಗಳು ಆ ಪತ್ರವನ್ನು ನಿಮಗೆ ರವಾನಿಸಿದರು. ನೀವು ಸಿಬ್ಬಂದಿಗೆ ವರ್ಗಾಯಿಸಿದಿರಿ. ಏನೂ ಗೊತ್ತಿಲ್ಲದ ಸಿಬ್ಬಂದಿ ಮತ್ತೊಬ್ಬ ಸಿಬ್ಬಂದಿಗೆ ಹಸ್ತಾಂತರಿಸಿದರು. ಆ ಸಿಬ್ಬಂದಿ ತಾನು ಬೆಂಗಳೂರಿಗೆ ಹೋಗಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಒಂದೆರಡು ದಿನಗಳಲ್ಲಿ ಸರಿಯಾಗುತ್ತದೆ ಎಂದರು. ಎರಡು ದಿನಗಳ ಬಳಿಕ ಮಾತನಾಡಿದಾಗ ‘ ಈಗ ಕಂಪ್ಯೂಟರ್‍ನಲ್ಲಿ ಪ್ರಿಂಟ್ ತೆಗೆದಾಗ ಮೊದಲಿಗಿಂತಲೂ ಹೆಚ್ಚಿಗೆ ಬಿಲ್ ಬರುತ್ತಿದೆ; ಏಪ್ರಿಲ್ ಬಿಲ್ ಪ್ರಕಾರ ಕಟ್ಟಿಬಿಡಿ’ ಎಂದು ಪುಕ್ಕಟೆ ಸಲಹೆ ನೀಡಿದರು.

ಆನಂತರ ಆಕಸ್ಮಿಕ ಭೇಟಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರಲ್ಲಿ ಜನರ ಸಮಸ್ಯೆ ವಿವರಿಸಿದೆ. ನಾಳೆಯೇ ಕಮಿಷನರ್ ಅವರನ್ನು ಕರೆದು ಮಾತನಾಡುತ್ತೇವೆ ಎಂದವರು 2 ದಿನಗಳಾದರೂ ಸುಮ್ಮನಿದ್ದರು. ಮತ್ತೆ ಜ್ಞಾಪಿಸಿದೆ. ‘ನೀವು ಕಾನೂನು ಉಲ್ಲಂಘಿಸಿದ್ದೀರಂತೆ. ಹಾಗಾಗಿ ಈ ಬಾರಿ ನಿಮಗೆ ಜಾಸ್ತಿ ತೆರಿಗೆ ಬಂದಿದೆಯಂತೆ’ ಎಂದರು. ‘ಕಳ್ಳ ಯಾವತ್ತೂ ಪೊಲೀಸರನ್ನು ಎದುರು ಹಾಕಿಕೊಳ್ಳುವದಿಲ್ಲ. ನಾನು ತಪ್ಪಿದ್ದರೆ ಮೌನವಾಗಿ ಹಣ ಪಾವತಿ ಮಾಡಿ ಬರುತ್ತಿದ್ದೆ; ಈ ರೀತಿ ನಿಮ್ಮೆಲ್ಲರ ಗಮನಕ್ಕೆ ತರುತ್ತಿರಲಿಲ್ಲ’ ಎಂದೆ. ಅಂದೇ ಸಂಜೆ ಆಸಕ್ತಿ ವಹಿಸಿ ನಿಮ್ಮೊಂದಿಗೆ ಸಭೆ ನಡೆಸಿದರು, ಇಂಜಿನಿಯರ್ ವನಿತಾ ಕೂಡಾ ಬಂದಿದ್ದರು.

ಶಾಸಕರ ಮುಂದೆ ದಾಖಲಾತಿಗಳ ಸಹಿತ ಸಮಸ್ಯೆ ವಿವರಿಸಿದೆ. ಪತ್ರಿಕೆಯಲ್ಲಿ ಪ್ರಕಟಿಸಿ; ನಾನು ಬೆಂಗಳೂರಿನಲ್ಲಿ ಈ ಬಗ್ಗೆ ಚರ್ಚಿಸುವೆ ಎಂದರು ಸುನಿಲ್. ನಿಮ್ಮಲ್ಲಿ ಈ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ; ಎಲ್ಲವೂ ಬೆಂಗಳೂರಿನಲ್ಲೇ ಆಗೋದು; ನಮ್ಮ ಕೈಯಲ್ಲಿಲ್ಲ ಎಂದಿರಿ. ಇಂಜಿನಿಯರ್ ವನಿತಾ ನೀಡಿದ ವಿವರಣೆ ಕೂಡಾ ಅಸಹಾಯಕತೆಯಿಂದ ತುಂಬಿತ್ತು. ಸುನಿಲ್ ಸುಬ್ರಮಣಿ ಅವರನ್ನು ಭೇಟಿ ಮಾಡಿದ ಸುದ್ದಿ ಪತ್ರಿಕೆಯಲ್ಲಿ ಬಂದ ಮಾರನೇ ದಿನ ನೀವು ಮಾಧ್ಯಮಗಳಲ್ಲಿ ಸಮಜಾಯಿಷಿಕೆ ಕೊಟ್ಟಿರಿ. ಅದು ವಕೀಲರುಗಳ ಲಘು ಹಾಸ್ಯದ ಮಾತಿನ ಇIಖಿಊಇಖ ಅಔಓಗಿIಓಅಇ ಔಖ ಅಔಓಈUSಇ ಅನ್ನುವಂತಿತ್ತು. ಹಾಗಾಗಿ ಪತ್ರಿಕೆಯಲ್ಲೇ ಬರೆದು ಸತ್ಯಾಸತ್ಯತೆ ವಿವರಿಸುತ್ತಿದ್ದೇನೆ.

ನಿವೇಶನ ಮತ್ತು ಕಟ್ಟಡದ ಮಾಹಿತಿಗಳನ್ನು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ ಎಂದು ಹೇಳಿದ್ದೀರಿ. ಅಪ್‍ಲೋಡ್ ಮಾಡಿದವರು ಯಾರು? ಅಪ್‍ಲೋಡ್ ಮಾಡಿದವರು ಸರಿಯಾಗಿ ಮಾಡಿದ್ದಾರೆಯೇ? ದರ ನಮೂದಿಸಿದಾಗ ಯಾವ ವರ್ಷದ ದರ ನಮೂದಿಸಿದ್ದಾರೆ? ಅದನ್ನು ತೆರಿಗೆ ಪಾವತಿಸಿದವರು ವೀಕ್ಷಿಸಲು ಅವಕಾಶವಿದೆಯೇ?

ಸಾರ್ವಜನಿಕರಲ್ಲಿ ನಗರಸಭೆ ದುಪ್ಪಟ್ಟು ತೆರಿಗೆ ವಿಧಿಸಿದೆ ಎಂದು ತಪ್ಪು ಮಾಹಿತಿ ಇದೆ ಎಂದಿದ್ದೀರಿ. ಹಾಗಾದಲ್ಲಿ ಸರಿಯಾದ ಮಾಹಿತಿ ನೀಡಲು ಯಾವ ತಜ್ಞರು ನಗರಸಭೆಯಲ್ಲಿದ್ದಾರೆ? ಹೆಚ್ಚು ತೆರಿಗೆ ಪಾವತಿಸಬೇಕಾದ ತೆರಿಗೆದಾರ ಅದರ ಮಾಹಿತಿ ಪಡೆಯುವ ಹಕ್ಕು ಹೊಂದಿಲ್ಲವೇ? ದೂರುದಾರರನ್ನೇ ಅಪರಾಧಿಗಳಂತೆ ಪ್ರತಿಬಿಂಬಿಸುವ ಕೆಲ ಸಿಬ್ಬಂದಿ ಸಮಸ್ಯೆ ಬಗ್ಗೆ ಯಾವ ಮಾಹಿತಿ ಹೊಂದಿದ್ದಾರೆ?

ಸುನಿಲ್ ಸುಬ್ರಮಣಿ ಅವರು ಬೆಂಗಳೂರಿಗೆ ಹೋದರೂ ಈಗಿನ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಸಚಿವರು ಸ್ಪಂದಿಸುವ ಸಾಧ್ಯತೆ ಇಲ್ಲದ್ದರಿಂದ ಸ್ವಯಂಘೋಷಿತ ಆಸ್ತಿ ತೆರಿಗೆಗೆ ಸಂಬಂಧಪಟ್ಟ ಹಳೇ ಕಡತಗಳನ್ನು ನಾನೇ ಕೆದಕಿದ್ದೇನೆ. ನಿಮ್ಮ ಗಮನಕ್ಕೆ ನಗರಸಭೆ ಎಲ್ಲಿ ಎಡವಿದೆ ಎಂದು ವಿವರಿಸುತ್ತಿದ್ದೇನೆ. ದಯವಿಟ್ಟು ಗಮನಿಸಿ.

ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿ ಹೊಸ ಸ್ವರೂಪಕ್ಕೆ ಬಂದಿದ್ದು, 2005ರಲ್ಲಿ. ಆಗ ‘ಮಾರ್ಗಸೂಚಿ ಕೈಪಿಡಿ’ ಒಂದನ್ನು ಅಂದಿನ ಪುರಸಭೆ ಮುದ್ರಿಸಿತು. ಅದರಲ್ಲಿ ನಗರದ 63 ಪ್ರದೇಶಗಳ ನಿವೇಶನಗಳ ಮಾರುಕಟ್ಟೆ ದರವನ್ನು ವಾಣಿಜ್ಯ ಮತ್ತು ಗೃಹ ಬಳಕೆ ಎಂದು ವಿಂಗಡಿಸಿ ನಮೂದಿಸಲಾಗಿದೆ. ಅಂದು ತೆರಿಗೆ ಪಾವತಿಸುವ ಸಂದರ್ಭ ಆ ದರಗಳನ್ನು ಆಧಾರವಾಗಿಟ್ಟುಕೊಂಡೇ ಜನ ತೆರಿಗೆ ಪಾವತಿ ಮಾಡುತ್ತಾ ಬಂದಿದ್ದಾರೆ.

ಪ್ರತಿ 3 ವರ್ಷಕ್ಕೊಮ್ಮೆ ದರ ಪರಿಷ್ಕರಣೆ ಮಾಡಬೇಕಾದಾಗ 2008-09 ರಲ್ಲಿ ಶೇಕಡಾ 28.5 ( ಇಷ್ಟು ಹೆಚ್ಚುವರಿ ಮಾಡಲು ಒಪ್ಪಿರಲಿಲ್ಲ; ಈ ಬಗ್ಗೆ ನಗರಸಭೆಯಲ್ಲಿ ತೀರ್ಮಾನವಾಗಿದೆ ಎಂದು ಕೆಲ ಮಾಜಿ ಸದಸ್ಯರು ಹೇಳುತ್ತಾರೆ) 2011-12 ರಲ್ಲಿ, 2014-15ರಲ್ಲಿ ಹಾಗೂ 2017-18 ರಲ್ಲಿ ಶೇಕಡಾ 15 ರಷ್ಟು ತೆರಿಗೆ ಹೆಚ್ಚು ಮಾಡಲಾಗಿ ಅದರಂತೆಯೇ ತೆರಿಗೆದಾರರು ಹಣ ಪಾವತಿಸುತ್ತಿದ್ದಾರೆ. ತೆರಿಗೆ ಪಾವತಿಯ ಅರ್ಜಿಯನ್ನು ಭರ್ತಿ ಮಾಡಲೆಂದೇ ನಗರಸಭೆಯಲ್ಲಿ ಹಲವರು ನೆರವಾಗುತ್ತಿದ್ದುದು ಈ ಬಾರಿ ಇಲ್ಲ; ಕಾರಣ ಕಂಪ್ಯೂಟರ್‍ನಲ್ಲೇ ಅರ್ಜಿ ಮುದ್ರಿಸಿಕೊಡಲಾಗುತ್ತಿದೆ ನಗರಸಭೆಯಲ್ಲಿ.

ಆಯುಕ್ತರೇ, ಎಡವಟ್ಟಾಗಿರುವದೇ ಕಂಪ್ಯೂಟರ್‍ಗೆ ನಿಮ್ಮಲ್ಲಿಂದ ಅಪ್‍ಲೋಡ್ ಮಾಡಿರುವ ದರಗಳಲ್ಲಿ... ಗಮನಿಸಿ

ಈಗ ಬರುತ್ತಿರುವ ಕಂಪ್ಯೂಟರ್ ಫಾರಂನಲ್ಲಿ ಮುದ್ರಿತವಾಗುತ್ತಿರುವದು 2005-06ನೇ ಸಾಲಿನ ಬಿಲ್‍ಗಳು. ಆ ಫಾರಂನ 4ನೇ ಪುಟದಲ್ಲಿ 2005 ರಿಂದ 2018ರವರೆಗೆ ಏರಿಕೆಯಾಗಿರುವ ದರದ ವಿವರವಿದೆ.

2005-06ರ ತೆರಿಗೆಯನ್ನು ಸ್ವಯಂ ಆಗಿ ಲೆಕ್ಕಾಚಾರ ಹಾಕುವ ಕಂಪ್ಯೂಟರ್‍ನಲ್ಲಿ ಅಪ್‍ಲೋಡ್ ಆಗಿರುವ ಭೂಮಿಯ ದರವನ್ನೊಮ್ಮೆ ಗಮನಿಸಿ. ಉದಾಹರಣೆಗೆ...

ನಗರದ ಕೊಹಿನೂರು ರಸ್ತೆಗೆ 2005ರಲ್ಲಿ ಮಾರ್ಗಸೂಚಿ ಪುಸ್ತಕದಲ್ಲಿ ಸೆಂಟ್ ಒಂದಕ್ಕೆ 75,000 ರೂಪಾಯಿ ಎಂದಿದ್ದು, ಕಂಪ್ಯೂಟರ್‍ನಲ್ಲಿ 3 ಲಕ್ಷ ಎಂದು ಅಪ್‍ಲೋಡ್ ಆಗಿದೆ. ಇದೇ ಸಮಸ್ಯೆಗೆ ಮೂಲ ಕಾರಣವಾಗಿದ್ದು, ಈ ಬಗ್ಗೆ ಕಂಪ್ಯೂಟರ್‍ನಲ್ಲಿ ದರ ಬದಲಾವಣೆ ಮಾಡಬೇಕಿದೆ. ಸಣ್ಣ ವ್ಯತ್ಯಾಸದಿಂದ ತೆರಿಗೆದಾರನಿಗೆ ಎಷ್ಟು ಹೊರೆಯಾಗುತ್ತದೆ ಎಂಬದಕ್ಕೆ ಕೆಳಗಿನ ಲೆಕ್ಕಾಚಾರಗಳನ್ನೊಮ್ಮೆ ಗಮನಿಸಿ.

ಕೊಹಿನೂರು ರಸ್ತೆಯಲ್ಲಿ 2393 ಚ. ಅಡಿಯಲ್ಲಿ ನಿರ್ಮಿಸಿರುವ ಕಟ್ಟಡ ಹಾಗೂ ಆವರಿಸಿರುವ ಭೂಮಿಯ ತೆರಿಗೆಯನ್ನು ಉದಾಹರಣೆಯಾಗಿ ನೀಡುತ್ತಿದ್ದೇನೆ. ಕಟ್ಟಡ ನಿರ್ಮಾಣದ ದರದಲ್ಲಿ ವ್ಯತ್ಯಾಸವಿಲ್ಲದ್ದರಿಂದ ಪೂರ್ಣ ವಿವರ ಹಾಕದೆ ತೆರಿಗೆ ಮಾತ್ರ ತೋರಿಸುತ್ತಿದ್ದೇನೆ. ಭೂಮಿಯ ದರದಲ್ಲಿ ಉಂಟಾಗಿರುವ ವ್ಯತ್ಯಾಸದ ಬಗ್ಗೆ ಕೆಳಗಿನ ವಿವರಣೆ ನೋಡಿ.

ಕಟ್ಟಡ ಆವರಿಸಿದ 2005ರ ದರ ಕಂಪ್ಯೂಟರ್‍ನಲ್ಲಿ ಒಟ್ಟು ಮೌಲ್ಯ ಕಂಪ್ಯೂಟರ್ ಶೇಕಡಾ 50 ಶೇಕಡಾ 50ರ ತೆರಿಗೆ ತೆರಿಗೆ

ಭೂಮಿ ಚ. ಅಡಿಗೆ ತಪ್ಪು ನಮೂದಿಸಿರುವ 2005 ರಂತೆ ಲೆಕ್ಕಾಚಾರದಲ್ಲಿ ರಿಯಾಯಿತಿ ರಿಯಾಯಿತಿ 0.7% ಕಂಪ್ಯೂಟರ್ ದರ

ಚ.ಅ. (ಕೈಪಿಡಿ ಮಾಹಿತಿ) ದರ ಚ.ಅಡಿಗೆ (ರೂ) (ರೂ) (2005) (ರೂ) (ಕಂಪ್ಯೂಟರ್) (ರೂ) (2005) ರೂಪಾಯಿ ಆಧಾರಿತ (ರೂ)

2393 ರೂ.172.176 ರೂ. 689.00 412017.90 1648777 2,06,008.95 824388.50 1442.00 5770.72

(ಸೆಂಟ್‍ಗೆ 75000) (ಸೆಂಟ್‍ಗೆ 3ಲಕ್ಷ)

ಅಂದರೆ ಕಂಪ್ಯೂರ್‍ನಲ್ಲಿ ತಪ್ಪು ದರ ನಮೂದಿಸಿರುವದರಿಂದಾದ ನಷ್ಟ ರೂ. 5770.72 - 1442.00 = ರೂ. 4328.72 (ಇದು ಕೇವಲ ಭೂಮಿ ತೆರಿಗೆಯಲ್ಲಿ)

ಮೇಲಿನ ಭೂಮಿ ತೆರಿಗೆಗೆ ಕಟ್ಟಡ ತೆರಿಗೆ ರೂ. 1783.68 ಅನ್ನು ಸೇರಿಸಿದರೆ 2005ರ ದರದಂತೆ ಒಟ್ಟು ತೆರಿಗೆ ಸೆಸ್ ಇತ್ಯಾದಿ ಬಿಟ್ಟು ರೂ. 3225.70 ಆದರೆ ಕಂಪ್ಯೂಟರ್ ಮುದ್ರಿತ ಅರ್ಜಿ ಪ್ರಕಾರ ರೂ. 7554.40. 2005ರ ತೆರಿಗೆಗೆ 2018ರವರೆಗೆ ಆಗಾಗ್ಗೆ ಏರಿಕೆ ಮಾಡಿದ ಲೆಕ್ಕಾಚಾರ ಕೆಳಗಿನಂತಿದೆ.

2005 ರಂತೆ ನೈಜ ತೆರಿಗೆ ಕಂಪ್ಯೂಟರ್‍ನಲ್ಲಿ ತಪ್ಪು ದರ

ವರ್ಷ ಭೂಮಿ + ಕಟ್ಟಡ (ರೂ) ನಮೂದಿಸಿ ತೋರಿಸಿದ ತೆರಿಗೆ (ರೂ)

2005-06 3225.70 7554.40

2008-09 ಏರಿಕೆ 28.5% 919.32 2153.00

ಒಟ್ಟು ಪಾವತಿಗೆ 4145.00 9707.40

2011-12 ಏರಿಕೆ 15% 621.75 1456.10

ಒಟ್ಟು ಪಾವತಿಗೆ 4766.78 11163.51

2014-15 ಏರಿಕೆ 15% 715.00 1674.52

ಒಟ್ಟು ಪಾವತಿಗೆ 5481.80 12838.04

2017-18 ಏರಿಕೆ 15% 822.27 1925.70

ಒಟ್ಟು ಪಾವತಿಗೆ 6304.00 14763.75

ಅಂದರೆ ತಪ್ಪು ದರ ನಮೂದಿಸಿರುವದರಿಂದ ತೆರಿಗೆದಾರನಿಗೆ ಆಗುವ ನಷ್ಟ (ಭೂಮಿ+ ಕಟ್ಟಡ ತೆರಿಗೆಯಲ್ಲಿ

ರೂ. 14763.75 - 6304.00 : ರೂ. 8459.75

ಈ ಎರಡೂ ಮೊತ್ತಗಳಿಗೆ ಶೇಕಡಾ26 ರೂ. 14763.00 + 3838.38 = 18601.38

ಉಪಕರ ಸೇರ್ಪಡೆಗೊಂಡರೆ ರೂ. 6304.00 + 1639.00 = 7943.00

ಒಟ್ಟು ನಷ್ಟ ರೂ.10658.38

(ಇದರೊಂದಿಗೆ 900.00 ಘನತ್ಯಾಜ್ಯ ಉಪಕರವನ್ನು ಸೇರಿಸಬೇಕು)