ಅನೇಕ ಸಂದರ್ಭಗಳಲ್ಲಿ ಕೆಲವರು ತಮ್ಮ ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಓಟರ್ ಐಡಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್‍ನ ಪಾಸ್ ಪುಸ್ತಕ ಇಂತಹ ಪೂರ್ಣ ವಿಳಾಸ ಇರುವ ಅಮೂಲ್ಯ ಮೂಲ ದಾಖಲೆಗಳನ್ನು ಆಕಸ್ಮಿಕವಾಗಿ ಕಳೆದುಕೊಳ್ಳುತ್ತಾರೆ. ಇಂತಹ ಮೂಲ ದಾಖಲೆಗಳು ಯಾರಿಗಾದರೂ ಸಿಕ್ಕಿದಾಗ ಅದರ ವಾರಿಸುದಾರರು ಯಾವದೇ ದೂರದ ಅಥವಾ ಹತ್ತಿರದ ಊರುಗಳಲ್ಲಿದ್ದರೂ ಅವರ ಮನೆ ಬಾಗಿಲಿಗೆ ತಲಪಿಸುವ ಕಾರ್ಯವನ್ನು ಕೇಂದ್ರ ಸರಕಾರ ಮಾಡುತ್ತದೆ.

ಆದುದರಿಂದ ಇಂತಹ ಅಮೂಲ್ಯ ದಾಖಲೆಗಳು ನಿಮಗೆ ಬಿದ್ದು ಸಿಕ್ಕಿದಾಗ ನೀವು ಮಾಡಬೇಕಿದ್ದು ಇಷ್ಟೆ. ಆ ದಾಖಲೆಯನ್ನು ಸಮೀಪದ ಪೋಸ್ಟ್ ಬಾಕ್ಸ್‍ನೊಳಗೆ ಹಾಕಿದರಾಯಿತು. ಅಂಚೆ ಕಚೇರಿಯವರು ಅದನ್ನು ಸಂಗ್ರಹಿಸಿ ನೇರವಾಗಿ ವಿಳಾಸದಾರರ ಮನೆಗೇ ತಲಪಿಸುತ್ತಾರೆ.

- ಆಧಾರ