* ಸಿದ್ದಾಪುರ, ಜು. 13: ಮಳೆ ಇಲ್ಲದೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಹಿನ್ನೆಡೆಯುಂಟಾಗಿರುವ ಹಿಲ್ಲೆಯಲ್ಲಿ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ತಾ. 15ರಂದು ಮಳೆ ದೇವರು ಶ್ರೀ ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಹಾಗೂ ತಲಕಾವೇರಿಯಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಆಡಳಿತ ಮಂಡಳಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ನೇತೃತ್ವದಲ್ಲಿ ಪದಾಧಿಕಾರಿಗಳು, ಸಿಬ್ಬಂದಿಗಳ ಸಹಿತ ಸಂಘಕ್ಕೆ ರಜೆ ಘೋಷಿಸಿ ಪೂಜೆ ಸಲ್ಲಿಸಲಿದ್ದು, ಬೆಳಿಗ್ಗೆ 9.30ಕ್ಕೆ ಪಾಡಿಯಲ್ಲಿ ನಂತರ ತಲಕಾವೇರಿಯಲ್ಲಿ ಪೂಜೆ ನಡೆಯಲಿದೆ.