ಚೆಟ್ಟಳ್ಳಿ, ಜು. 13: ವೀರಾಜಪೇಟೆಯ ಅನ್ವಾರುಲ್ ಹುದಾ ಹಿಫ್ಝುಲ್ ಕುರ್-ಆನ್ ವಿದ್ಯಾರ್ಥಿಗಳ ಅಧಿಕೃತ ಸಂಘಟನೆಯಾದ “ಅಝ್ಹಾರುಲ್ ಕುರ್-ಆನ್ ಸ್ಟುಡೆಂಟ್ ಅಸೋಸಿಯೇಷನ್” ಇದರ ನೂತನ ಅಧ್ಯಕ್ಷರಾಗಿ ಅನಸ್ ಹುಂಡಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಉನೈಸ್ ಕಡಂಗ, ಹಾಗೂ ಕೋಶಾಧಿಕಾರಿಯಾಗಿ ರುಮೈಝ್ ಗರಗಂದೂರು ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಪ್ರಾಧ್ಯಾಪಕರಾದ ಶಫೀಕ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾಫಿಝ್ ಶುಹೈಬ್ ಸಖಾಫಿ ಉದ್ಘಾಟನೆ ಮಾಡಿದರು . ಖಮರುದ್ದೀನ್ ಅನ್ವಾರಿ ಅಸ್ಸಖಾಫಿ ಸಂಘಟನೆಯ ಗೌರವಾಧ್ಯಕ್ಷರಾಗಿ ನೇಮಕಗೊಂಡರು.
ಇದೇ ಸಂದರ್ಭದಲ್ಲಿ ಜೂನಿಯರ್ ಅಕಾಡೆಮಿ ವಿದ್ಯಾರ್ಥಿಗಳ ಸಂಘಟನೆ ‘ಅಹ್ಸಾ’ಗೆ ಸಂಶೀರ್ ಅಧ್ಯಕ್ಷರಾಗಿ, ಅನೀಸ್ ಪ್ರಧಾನ ಕಾರ್ಯದರ್ಶಿಯಾಗಿ, ಸಿನಾನ್ ಕೋಶಾಧಿಕಾರಿಯಾಗಿ ಆಯ್ಕೆಯಾದರು.