ಶ್ರೀಮಂಗಲ, ಜು. 13: 2019-20ನೇ ಸಾಲಿನ ಶ್ರೀಮಂಗಲ ಹೋಬಳಿ ವ್ಯಾಪ್ತಿಯ ರೈತರಿಗೆ ಮುಂಗಾರಿನ ಭತ್ತದ ಬೀಜಗಳ ಉಪಚಾರ ಕೀಟ-ರೋಗ ಹತೋಟಿ ಕ್ರಮದಲ್ಲಿ ಸುರಕ್ಷಿತವಾಗಿ ಕೀಟ ನಾಶಕ ಮತ್ತು ರೋಗ ನಾಶಕಗಳನ್ನು ಬಳಸುವ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಕೃಷಿ ಇಲಾಖೆಯ ವತಿಯಿಂದ ತಾ. 15 ರಂದು ಪೂರ್ವಾಹ್ನ 11 ಗಂಟೆಗೆ ಶ್ರೀಮಂಗಲ ಗ್ರಾಮ ಪಂಚಾಯಿತಿ ಸಂಭಾಗಣದಲ್ಲಿ ಆಯೋಜಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.