ಮಡಿಕೇರಿ, ಜು. 13: ಮುಳಿಯ ಕೇಶವ ಭಟ್ ಅಂಡ್ ಸನ್ಸ್ ವತಿಯಿಂದ ಗೋಣಿಕೊಪ್ಪಲಿನಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಒಟ್ಟು 90 ವಿದ್ಯಾರ್ಥಿಗಳು ಭಾಗವಹಿಸಿದ್ದು, ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳಾದ ಪಿ.ಪಿ. ಲಿತನ್ 8ನೇ ತರಗತಿ ಪ್ರಥಮ ಬಹುಮಾನ ಮತ್ತು ಪಿ.ಪಿ. ಪ್ರಣವ್ 10ನೇ ತರಗತಿ ತೃತೀಯ ಬಹುಮಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ಪ್ರಮೀಳಾ, ಪ್ರಾಥಮಿಕ ಶಾಲಾ ಸಂಯೋಜಕಿ ಜಾಯ್ಸಿ ಮತ್ತು ಸಹ ಶಿಕ್ಷಕಿ ಅನುಪಮ ತರಬೇತಿ ನೀಡಿದ್ದಾರೆ.