ವೀರಾಜಪೇಟೆ, ಜು. 12: ವೀರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ನಡೆದ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಅಂತಿಮ ವಾಗಿ 10 ವಿದ್ಯಾರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಮೈಸೂರಿನ ಕನ್ಸೂಲರ್ (ಛಿoಟಿzuಟeಡಿe) ನೆಕ್ಸ್ಟ್ ವೆಲ್ತ್ ಪ್ರೈವೇಟ್ ಲಿಮಿಟೆಡ್ ಅವರು ಸಂದರ್ಶನ ನಡೆಸಿದರು.

ಒಟ್ಟು 60 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸಂದರ್ಶನದಲ್ಲಿ 29 ವಿದ್ಯಾರ್ಥಿಗಳು ಮುಂದಿನ ಸುತ್ತಿಗೆ ಆಯ್ಕೆಯಾಗಿ ಅಂತಿಮವಾಗಿ 10 ವಿದ್ಯಾರ್ಥಿಗಳಿಗೆ ಆಟ್ಟಿಟ್ಯೂಡ್ ಟೆಸ್ಟ್, ಗುಂಪು ಸಂದರ್ಶನ, ಮುಖಾಮುಖಿ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸೇರ್ಪಡೆಯ ಪತ್ರವನ್ನು ನೀಡಿದರು.

ಅಂತಿಮ ಪದವಿ ತರಗತಿಯ ವಿದ್ಯಾರ್ಥಿಗಳಾದ ಕೆ.ಎಸ್. ಶ್ರುತಿ, ಕೆ.ಅಕ್ಷಿತ್, ಪಿ.ಕೆ. ರಿಹಾ, ಟಿ.ಜೆ. ಗೌರಮ್ಮ, ಕೆ.ಜಿ. ದೀಪನಾ, ಟಿ.ಕೆ. ನಿದಿಶಾ, ವಿ.ಪಿ. ತಂಗಮ್ಮ, ದೀಪಿಕಾ, ಸಗುಣಾ ತಾಪ, ವರ್ಷಿತಾ ಇವರು ಆಯ್ಕೆಯಾಗಿ ಉದ್ಯೋಗ ಪಡೆದಿದ್ದಾರೆ. ಅಂತಿಮ ಹಂತದ ಸಂದರ್ಶನವು ಮೈಸೂರಿನಲ್ಲಿ ನಡೆಯಿತು. ಸಂತ ಅನ್ನಮ್ಮ ಪದವಿ ಕಾಲೇಜಿನ ಕೌಶಲ್ಯಭಿವೃದ್ದಿ ಮತ್ತು ಉದ್ಯೋಗ ಘಟಕದ ಜೋಯ್ಸನ್ ಲೋಬೋ ಅವರ ನೇತೃತ್ವದಲ್ಲಿ ಈ ಸಂದರ್ಶನ ಆಯೋಜಿಸಲಾಗಿತ್ತು.