ಕುಶಾಲನಗರ, ಜು. 12: ಕುಶಾಲನಗರ ರೋಟರಿ ಸಂಸ್ಥೆಯ ಆಶ್ರಯದಲ್ಲಿ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ರೋಟರಿ ಅಧ್ಯಕ್ಷ ಅಶೋಕ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರತಿಭಾ, ರೋಟರಿ ಪದಾಧಿಕಾರಿಗಳಾದ ಡಾ. ಹರಿ ಎ ಶೆಟ್ಟಿ, ಶೋಭಾ ಸತೀಶ್, ಪಂಚಾಯ್ತಿ ಸದಸ್ಯೆ ರೂಪಾ ಉಮಾಶಂಕರ್ ಮತ್ತಿತರರು ಇದ್ದರು.