ಕೊಡ್ಲಿಪೇಟೆ, ಜು. 8: ಶರಣ ಸಾಹಿತ್ಯ ಪರಿಷತ್ತಿಗೆ ಸದಸ್ಯತ್ವ ಅಭಿಯಾನವನ್ನು ಕೊಡ್ಲಿಪೇಟೆ ನಿಲುವಾಗಿಲು ಬಾಲತ್ರಿಪುರ ಸುಂದರಿ ದೇವಾಲಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಸದಸ್ಯತ್ವ ಅಭಿಯಾನಕ್ಕೆ ಸದಸ್ಯರಾಗುವ ಮೂಲಕ ಮುದ್ದಿನಕಟ್ಟೆ ಮಠದ ಅಭಿನವ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಶರಣ ಸಾಹಿತ್ಯ ಕೇವಲ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ ಇಲ್ಲಿ ಎಲ್ಲಾ ಜಾತಿ ಧರ್ಮದವರು ಸಹ ಸದಸ್ಯರಾಗಲು ಅವಕಾಶಗಳಿದ್ದು ಶರಣರ ಅಚಾರ ವಿಚಾರಗಳನ್ನು ನಾಡಿನುದ್ದಕ್ಕು ವಿಸ್ತರಿಸುವ ಕೆಲಸ ಪರಿಷತ್ತಿನಿಂದಾಗುತ್ತಿದೆ ಎಂದರು.

ಈ ಸಂದರ್ಭ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲು ಮಠದ ಮಹಂತ ಸ್ವಾಮೀಜಿ, ಶರಣಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷ ಎಸ್.ಮಹೇಶ್, ಸೋಮಪ್ಪ, ಜಿಲ್ಲಾ ವೀರಶೈವ ಸಮಾಜದ ಜಿಲ್ಲಾದ್ಯಕ್ಷ ಶಿವಪ್ಪ, ಮಹದೇವಪ್ಪ, ಉದಯ್, ರಾಜಶೇಖರ್, ರೇಣುಕ, ಪ್ರಸನ್ನ, ಪುಟ್ಟಸ್ವಾಮಿ, ಶಿವಕುಮಾರ್, ವಸಂತ್‍ಕುಮಾರ್ ಮುಂತಾದವರಿದ್ದರು.