ಮಡಿಕೇರಿ, ಜು.8: ‘ವಿ ನೀಡ್ ಎರ್ಮೆಜೆನ್ಸಿ ಹಾಸ್ಪಿಟಲ್ ಇನ್ ಕೊಡಗು’ (ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು) ಅಭಿಯಾನವನ್ನು ಬೆಂಬಲಿಸಿ ಟೀಂ ಕೂರ್ಗ್ ಸಂಸ್ಥೆ ಹೊರ ತಂದಿರುವ ಸ್ಟಿಕ್ಕರ್‍ನ್ನು ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು.
ಅಭಿಯಾನ ಬೆಂಬಲಿಸಿ ತಯಾರಾಗಿರುವ ‘ಬಾಳ್‍ರ ನಡೆಲ್’ ಕಿರುಚಿತ್ರ ಸಿಡಿ ಬಿಡುಗಡೆ ಸಂದರ್ಭ ಟೀಂ ಕೂರ್ಗ್ ಸಂಸ್ಥೆ ಹೊರ ತಂದಿರುವ ಸ್ಟಿಕ್ಕರ್‍ನ್ನು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಯುಕೋ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರುಗಳು ಬಿಡುಗಡೆಗೊಳಿಸಿದರು. ಈ ಸಂದರ್ಭ ಸಾರ್ವಜನಿಕರಿಗೆ ಉಚಿತವಾಗಿ ಸ್ಟಿಕ್ಕರ್ ನೀಡಿ ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುವಂತೆ ಸಂಸ್ಥೆಯ ಸದಸ್ಯರು ಮನವಿ ಮಾಡಿದರು. ಕಿರುಚಿತ್ರ ನಿರ್ದೇಶಕಿ ಯರಾದÀ ಕಳ್ಳಿಚಂಡ ದೀನಾ, ತಡಿಯಂಗಡ ಗಾನ, ಟೀಂ ಕೂರ್ಗ್ ಸಂಸ್ಥೆಯ ಸ್ಥಾಪಕರಾದ ಶಮೀರ್. ಎಸ್. ಆರ್, ಖಲೀಲ್ ಬಾಷ, ನಾಸಿರ್ ಎಂ.ಎನ್, ಫೈಸಲ್. ಇ.ಪಾಯಡತ್ ಹಾಗೂ ಸದಸ್ಯರಾದ ರೋಷನ್, ಆರೀಫ್ ಮತ್ತು ಆಕಿಬ್ ಇದ್ದರು.