ಮಡಿಕೇರಿ, ಜು. 7: ಜಿಲ್ಲಾ ಪತ್ರಕರ್ತ ಸಂಘ ಹಾಗೂ ಪ್ರೆಸ್ ಕ್ಲಬ್ ಸಹಯೋಗದಲ್ಲಿ ತಾ. 27 ರಂದು ಪತ್ರಿಕಾ ದಿನಾಚರಣೆ ನಡೆಯಲಿದೆ. ಮಡಿಕೇರಿಯ ಪತ್ರಿಕಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಯಾಗಿರುವಂತಹ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಶೇ. 85 ಕ್ಕಿಂತ ಅಧಿಕ ಅಂಕ ಪಡೆದಿರುವ ಒಂದರಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳು ಹಾಗೂ ಶೇ. 70 ಕ್ಕಿಂತ ಅಧಿಕ ಅಂಕ ಪಡೆದಿರುವ ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸ ಲಾಗುವದು. ಅರ್ಹ ವಿದ್ಯಾರ್ಥಿಗಳು ತಾ. 15 ರೊಳಗೆ ಅಂಕಪಟ್ಟಿಯ ನಕಲು, ಒಂದು ಭಾವಚಿತ್ರ ಹಾಗೂ ಸ್ವವಿವರದ ಪತ್ರದೊಂದಿಗೆ ಪತ್ರಿಕಾಭವನಕ್ಕೆ ತಲಪಿಸಬೇಕಾಗಿರುತ್ತದೆ ಎಂದು ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.