ಕುಶಾಲನಗರ, ಜು. 7: ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶನಿವಾರ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮ ಜರುಗಿತು.

ಕೇರಳದ ಬಾಲಕೃಷ್ಣ ಪಣಿಕ್ಕರ್ ಅವರ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಕಾರ್ಯಕ್ರಮದಲ್ಲಿ ದೇವಾಲಯದ ಅಭಿವೃದ್ಧಿ ಬಗ್ಗೆ ಸೇರಿದಂತೆ ಹಲವು ಕಾರ್ಯಗಳ ಬಗ್ಗೆ ಪ್ರಶ್ನೆ ನಡೆಸಲಾಯಿತು.

ಈ ಸಂದರ್ಭ ದೇವಾಲಯದ ಅಧ್ಯಕ್ಷರಾದ ಬಿ.ಪಿ. ಗಣಪತಿ, ಮಾಜಿ ಅಧ್ಯಕ್ಷರಾದ ಕೆ.ಆರ್. ಶಿವಾನಂದನ್, ಟ್ರಸ್ಟಿಗಳಾದ ಪಿ.ಪಿ. ಸತ್ಯನಾರಾಯಣ, ಶ್ರೀನಿವಾಸರಾವ್, ಡಿ. ಆರ್, ಸೋಮಶೇಖರ್, ದೇವಾಲಯ ಅರ್ಚಕರು ಮತ್ತಿತರರು ಇದ್ದರು.