ಶನಿವಾರಸಂತೆ, ಜು. 6: ಹೆಬ್ಬುಲುಸೆ ಕೆರೆಹಳ್ಳಿ ಗ್ರಾಮದ ಪಿಕಪ್ ವಾಹನ (ಕೆಎ-12 ಬಿ-1368) ಮಾಲೀಕ ಕುಮಾರಸ್ವಾಮಿ ಎಂಬಾತ ನಿಶಾಮತ್ತನಾಗಿ ವಾಹನ ಚಾಲಿಸಿ ಮೋರಿಯೊಂದಕ್ಕೆ ಡಿಕ್ಕಿಪಡಿಸಿದ್ದಲ್ಲದೆ, ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ರೂ. 3,500 ದಂಡ ವಿಧಿಸಲಾಗಿದೆ.