ಮಡಿಕೇರಿ, ಜು. 6: ಕೊಡಗಿಗೆ ಮಲ್ವಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಮಾನಕ್ಕೆ ಬೆಂಬಲವಾಗಿ ಕೊಡವ ಭಾಷೆಯಲ್ಲಿ ಬಾಳ್‍ರ ನಡೆಲ್ ಕಿರುಚಿತ್ರ ನಿರ್ಮಾಣಗೊಂಡಿದೆ.
ತಾ.8 ರಂದು ಮಧ್ಯಾಹ್ನ 2.30 ಗಂಟೆಗೆ ಮಡಿಕೇರಿ ಪತ್ರಿಕಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಿರುಚಿತ್ರವನ್ನು ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಅನಾವರಣ ಮಾಡಲಿದ್ದಾರೆ.
ಯುಕೋ ಸಂಘಟನೆ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯಅತಿಥಿಯಾಗಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪಾಲ್ಗೊಳ್ಳಲಿದ್ದಾರೆ. 15 ನಿಮಿಷದ ಕಿರುಚಿತ್ರವನ್ನು ಸತತ 10 ಗಂಟೆ ಅವಧಿಯಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ನಿರ್ದೇಶಕಿಯರಾದ ದೀನ ಮತ್ತು ಗಾನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾವಳಗೇರಿ ವಾಸಿಗಳಾದ ತಡಿಯಂಗಡ ಗಾನ ಸೋಮಣ್ಣ, ಕಳ್ಳಿಚಂಡ ದೀನ ಉತ್ತಪ್ಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ದೀನ ಮತ್ತು ಗಾನ ಸೇರಿ ಡಿ ಅಂಡ್ ಜಿ ಕ್ರಿಯೇಷನ್‍ನಡಿ ಕಿರುಚಿತ್ರ ಸಿದ್ಧ ಪಡಿಸಿದ್ದಾರೆ. ಕಾವಾಡಿಚಂಡ ದೀಪಕ್ ನಿರ್ಮಾಪಕರಾಗಿದ್ದು, ಮೈಸೂರಿನ ಯತ್ನಾ ಸ್ಟುಡಿಯೋದಲ್ಲಿ ಸಿದ್ಧ ಪಡಿಸಲಾಗಿದೆ. ಹಿರಿಯ ಕಲಾವಿದರಾದ ನೆರವಂಡ ಉಮೇಶ್, ತಾತಂಡ ಪ್ರಭಾ ನಾಣಯ್ಯ, ಕಟ್ಟೇರ ವಿದ್ಯಾ, ಮಲ್ಲಮಾಡ ಶಾಮಲಾ ಅಭಿನಯಿಸಿದ್ದಾರೆ.