ಮಡಿಕೇರಿ, ಜು. 6: ಭಾರತೀಯ ಸೇನಾಪಡೆಗಳಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಪೆÇೀಷಕರು ಬಾಲ್ಯದಿಂದಲೇ ಮಕ್ಕಳಲ್ಲಿ ಸೇನೆಯ ಮಹತ್ವದ ತಿಳುವಳಿಕೆ ಮೂಲಕ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ನಿವೃತ್ತ ಮೇಜರ್ ಜನರಲ್ ಕಾಳೆಂಗಡ ಸಿ.ಕಾರ್ಯಪ್ಪ ಕರೆ ನೀಡಿದ್ದಾರೆ.

ಮಡಿಕೇರಿ ರೋಟರಿ ಕ್ಲಬ್‍ನ 67ನೇ ಅಧ್ಯಕ್ಷರಾಗಿ ಕಿರಿಯಮಾಡ ರತನ್ ತಮ್ಮಯ್ಯ ಮತ್ತು ಕಾರ್ಯದರ್ಶಿಯಾಗಿ ಕಾಂಡಂಡ ಕಾರ್ಯಪ್ಪ ಅವರಿಗೆ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮೇ.ಜ.ಕೆ.ಸಿ. ಕಾರ್ಯಪ್ಪ, ಭಾರತೀಯ ಸೇನಾಪಡೆ ವೃತ್ತಿಪರತೆ, ವೃತ್ತಿ ಸಂತೃಪ್ತಿ, ಆರ್ಥಿಕ ಸಬಲತೆ, ಗುಣಮಟ್ಟದ ಜೀವನ ಶೈಲಿಯೊಂದಿಗೆ ಸೈನಿಕನನ್ನು ಅತ್ಯುತ್ತಮ ಪ್ರಜೆಯನ್ನಾಗಿ ರೂಪಿಸುತ್ತದೆ. ಇಂಥ ಮಹತ್ತರ ಅವಕಾಶ ಬೇರೆ ಯಾವದೇ ವೃತ್ತಿಯಲ್ಲಿಯೂ ದೊರಕುವದಿಲ್ಲ. ಹೀಗಾಗಿ ಪ್ರತೀಯೋರ್ವ ಪೆÇೀಷಕರೂ ತಮ್ಮ ಮಕ್ಕಳನ್ನು ಸೇನಾಪಡೆಗೆ ಸೇರ್ಪಡೆಗೊಳಿಸುವಲ್ಲಿ ಚಿಕ್ಕಂದಿನಿಂದಲೇ ಮಕ್ಕಳ ಮನಸ್ಸಿನಲ್ಲಿ ಸೇನಾಪಡೆಯ ವೃತ್ತಿಯ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸಬೇಕೆಂದು ಕರೆ ನೀಡಿದರು.

ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಭಾರತೀಯ ಸೈನಿಕರು ಭಾರತದ ಜನರ ಸಂರಕ್ಷಣೆಗೆ ಮುಂದಾಗುತ್ತಾರೆ ಎಂದು ಸೈನಿಕನ ವೃತ್ತಿ ನಿಷ್ಟೆಯ ಬಗ್ಗೆ ಶ್ಲಾಘಿಸಿದ ಕೆ.ಸಿ.ಕಾರ್ಯಪ್ಪ, ಹಲವಾರು ವರ್ಷಗಳ ಮೊದಲೇ ಭಾರತೀಯ ಸೇನೆ ಗ್ರಾಮೀಣ ಪ್ರದೇಶಗಳಲ್ಲಿ ಹಸಿರೀಕರಣದಂಥ ಯೋಜನೆ ಜಾರಿಗೊಳಿಸಿ ಜನರ ಮನ ಗೆದ್ದಿತ್ತು ಎಂದು ಸೇನಾಪಡೆಯ ಹಸಿರು ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಬೆಂಗಳೂರಿನ ಡೊಗ್ರ ರೆಜಿಮೆಂಡ್ ಕೊಡಗು, ಕೇರಳ ಸೇರಿದಂತೆ ಪ್ರಕೃತಿ ವಿಕೋಪ ಪ್ರದೇಶಗಳಲ್ಲಿ ನಾಗರಿಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದನ್ನು ಶ್ಲಾಘಿಸಿದ ಮೇ.ಜ.ಕೆ.ಸಿ. ಕಾರ್ಯಪ್ಪ, ಇಂಥ ಕಾರ್ಯಗಳಿಂದ ಭಾರತೀಯ ಸೇನೆ ಜನಸ್ಮೇಹಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ರೋಟರಿ ಸಂಸ್ಥೆಗೆ ಸಮಾಜಸೇವಾ ಮನೋಭಾವದ ತುಡಿತವಿದ್ದು ಹೀಗಾಗಿಯೇ ರೋಟರಿ ಸದಸ್ಯರು ಇತರರಿಗಿಂತ ಭಿನ್ನವಾಗಿ ಚಿಂತಿಸಬಲ್ಲವರಾಗಿದ್ದಾರೆ ಎಂದೂ ಶ್ಲಾಘಿಸಿದರು.

ಮಡಿಕೇರಿ ರೋಟರಿಯ ನೂತನ ತಂಡಕ್ಕೆ ಅಧಿಕಾರ ಪದಗ್ರಹಣ ನೆರವೇರಿಸಿದ ನಾಮಾಂಕಿತ ಗವರ್ನರ್ ರವೀಂದ್ರ ಭಟ್ ಮಾತನಾಡಿ, ಸಮಾಜಸೇವಾ ಮನೋಧರ್ಮದ ಎಲ್ಲರನ್ನೂ ರೋಟರಿ ಸಂಸ್ಥೆಯು ಒಂದೇ ವೇದಿಕೆಯಡಿ ಒಗ್ಗೂಡಿಸುತ್ತದೆ ಎಂದರಲ್ಲದೇ, ದಾನ ಮಾಡಲು ಖಂಡಿತಾ ಹಣ, ಆಸ್ತಿಯ ಅಗತ್ಯವಿಲ್ಲ. ದಾನ ಮಾಡುವ ಮನಸ್ಸು ಮೊದಲು ಮೂಡಿದರೆ ಯಾವದೂ ಅಸಾಧ್ಯವಾಗದೆ ಎಲ್ಲವೂ ದೊರಕುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರೋಟರಿ ವಲಯ 6ರ ಸಹಾಯಕ ಗವರ್ನರ್ ಪಿ.ನಾಗೇಶ್ ಮಾತನಾಡಿ, ಈ ಬಾರಿ ರೋಟರಿ ವತಿಯಿಂದ ಜೀವನ್ ಸಂಧ್ಯಾ ಎಂಬ ಹಿರಿಯ ನಾಗರಿಕರಿಗಾಗಿನ ಯೋಜನೆ ಮತ್ತು ಸೇವ್ ಎ ಲೈಫ್ ಎಂಬ ತುರ್ತು ಚಿಕಿತ್ಸೆಯ ಯೋಜನೆ ಜಾರಿಗೊಳಿಸಲಾಗಿದ್ದು ರೋಟರಿ ಸದಸ್ಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಸಮಾಜಕ್ಕೆ ಅಗತ್ಯ ನೆರವು ನೀಡಬೇಕೆಂದು ಕೋರಿದರು.

ರೋಟರಿಯ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಮಾತನಾಡಿ, 67 ವರ್ಷಗಳ ಇತಿಹಾಸದಿಂದ ಪ್ರತಿಷ್ಟಿತ ರೋಟರಿ ಸಂಸ್ಥೆಯಾಗಿರುವ ಮಡಿಕೇರಿ ರೋಟರಿ 3 ಜಿಲ್ಲಾ ಗವರ್ನರ್‍ಗಳನ್ನು ನೀಡಿದ ಹಿರಿಮೆ ಹೊಂದಿದೆ ಎಂದು ಶ್ಲಾಘಿಸಿದರಲ್ಲದೇ, ಭಾರತಕ್ಕೆ ರೋಟರಿ ಪ್ರವೇಶಿಸಿ 100 ವರ್ಷಗಳಾಗಿರುವ ಹಿನೆÀ್ನಲೆಯಲ್ಲಿ ಈ ವರ್ಷ ರೋಟರಿಯ ಶತಮಾನೋತ್ಸವವನ್ನು ಪ್ರತೀ ಕ್ಲಬ್‍ಗಳು ವಿಭಿನ್ನವಾಗಿ ಆಚರಿಸುವಂತೆ ಹೇಳಿದರು.

ಮಡಿಕೇರಿ ರೋಟರಿಯ ನೂತನ ಅಧ್ಯಕ್ಷ ರತನ್ ತಮ್ಮಯ್ಯ ಮಾತನಾಡಿ, ತನ್ನ ಅಧಿಕಾರಾವಧಿಯಲ್ಲಿ ಮಡಿಕೇರಿಯ ಹಸಿರೀಕರಣಕ್ಕೆ ಆದ್ಯತೆ ನೀಡುವದರೊಂದಿಗೆ ಸ್ವಚ್ಛ ಮಡಿಕೇರಿ, ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ, ಶಿಕ್ಷಕರಿಗೆ ವೃತ್ತಿ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವದಾಗಿ ಘೋಷಿಸಿದರು.

ಮಡಿಕೇರಿ ರೋಟರಿಯ ನಿರ್ಗಮಿತ ಅಧ್ಯಕ್ಷ ಓ.ಎಸ್. ಚಿಂಗಪ್ಪ, ನಿರ್ಗಮಿತ ಕಾರ್ಯದರ್ಶಿ ಮೃಣಾಲಿನಿ ವೇದಿಕೆಯಲ್ಲಿದ್ದರು. ಡಾ.ಲೋಕೇಶ್ ಅವರನ್ನು ಮಡಿಕೇರಿ ರೋಟರಿಯ ನೂತನ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು.

ಮಾತಂಡ ಸುರೇಶ್ ಚಂಗಪ್ಪ, ಡಿ.ಎಂ.ಕಿರಣ್, ಎಂ.ಎಂ.ಕಾರ್ಯಪ್ಪ, ಎಂ.ಈಶ್ವರ ಭಟ್, ಎನ್.ಡಿ.ಅಚ್ಚಯ್ಯ, ಅನಿಲ್ ಕೃಷ್ಣಾನಿ, ಡಾ.ಜನಾರ್ಧನ್, ಅಮರ್ ಶರ್ಮ, ಎಂ.ಎಸ್. ಕರುಂಬಯ್ಯ, ಡಾ.ಮೋಹನ್ ಅಪ್ಪಾಜಿ, ಚಂಗಪ್ಪ, ಪಾರ್ವತಿ ಎಂ.ಜಿ., ಎನ್.ಸಿ. ಚೀಯಣ್ಣ, ಸಲೀಲಾ ಪಾಟ್ಕರ್, ಅಜಯ್ ಸೂದ್, ಮಂದಣ್ಣ, ಗೀತಾ ಗಿರೀಶ್ ವಿವಿಧ ಯೋಜನಾ ಸಮಿತಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.