ಸಿದ್ದಾಪುರ, ಜು. 5: ಹೊಟೇಲ್ ಒಂದಕ್ಕೆ ಕಳ್ಳರು ನುಗ್ಗಿ ಕಳ್ಳತನ ಮಾಡಿರುವ ಘಟನೆ ಮಾಲ್ದಾರೆಯ ಕಳ್ಳಲದಲ್ಲಿ ನಡೆದಿದೆ.
ಮಾಲ್ದಾರೆ ಗ್ರಾಮದ ಕಳ್ಳಲದಲ್ಲಿ ಹೊಟೇಲ್ ನಡೆಸುತ್ತಿದ್ದ ಸಮೀರ್ ಎಂಬವರು ತಾ.4 ರಂದು ರಾತ್ರಿ 8 ಗಂಟೆಗೆ ವ್ಯಾಪಾರ ಮುಗಿಸಿಕೊಂಡು ಬೀಗ ಹಾಕಿ ತನ್ನ ಮನೆಯ ಮಾಲ್ದಾರೆಯ ಬಾಡಗಕ್ಕೆ ತೆರಳಿದ್ದಾರೆ. ಇಂದು ಬೆಳಗಿನ ಜಾವ ಹೊಟೇಲ್‍ಗೆ ಬಂದು ಬಾಗಿಲು ತೆಗೆಯಲು ಮುಂದಾದಾಗ ಬಾಗಿಲಿನ ಬೀಗ ಮುರಿದಿರುವದು ಕಂಡುಬಂದಿದೆ. ಒಳಗಿನ ಕೊಠಡಿಯಲ್ಲಿ ಇಟ್ಟಿದ್ದ 2 ಗ್ಯಾಸ್ ಸಿಲಿಂಡರ್ ಹಾಗೂ 1600 ರೂ. ನಗದು ಹಣವನ್ನು ಕಳ್ಳತನ ಮಾಡಲಾಗಿದ್ದು, ಈ ಬಗ್ಗೆ ಸಮೀರ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಾಗಿದೆ.