ಗುಡ್ಡೆಹೊಸೂರು, ಜು. 5: ಇಲ್ಲಿಗೆ ಸಮೀಪದ ಬಸವನಹಳ್ಳಿ ಗ್ರಾಮ ನಿವಾಸಿ ಪೀಟರ್ ಎಂಬವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಆಗಿ ಮನೆಯಲ್ಲಿ ಭಾರೀ ಹೊಗೆ ಕಾಣಿಸಿಕೊಂಡಿತ್ತು. ಇಂದು ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ. ಮನೆಯ ಸಂಪೂರ್ಣ ವೈರಿಂಗ್ ಸುಟ್ಟು ಕರಕಲಾಗಿದೆ. ಕಳೆದ 4 ತಿಂಗಳ ಹಿಂದೆ ಗೃಹ ಪ್ರವೇಶ ನಡೆದಿದೆ. ಬಿ.ಎಸ್.ಎನ್.ಎಲ್. ನೌಕರರಾಗಿರುವ ಪೀಟರ್ ಅವರ ಈ ಮನೆಯು ಬಸವನಹಳ್ಳಿಯ ಹೇರೂರು ರಸ್ತೆಯಲ್ಲಿದೆ. ಕುಶಾಲನಗರದ ಆಗ್ನಿ ಶಾಮಕ ದಳ ದವರು ತಕ್ಷಣ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.