ಸುಂಟಿಕೊಪ್ಪ, ಜು. 4: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸೇವ್ ಲೈಪ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ 7ನೇ ಹೊಸಕೋಟೆ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

7ನೇ ಹೊಸಕೋಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶುಗಳ ಪ್ರದರ್ಶನ ಸಮಾರಂಭಕ್ಕೆ ಹೊಸಕೋಟೆ ಗ್ರಾ.ಪಂ. ಉಪಾಧ್ಯಕ್ಷ ಮುಸ್ತಾಫ ಚಾಲನೆ ನೀಡಿದರು. ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕಿ ಬಿ.ಟಿ. ಚಂದ್ರಮ್ಮ ಶಿಶುಗಳ ಆರೋಗ್ಯ ಹಾರೈಕೆಯ ಕುರಿತು ತಾಯಂದರಿಗೆ ಮಾಹಿತಿ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸೇವ್‍ಲೈಪ್ ಫೌಂಡೇಶನ್ ಕಾರ್ಯದರ್ಶಿ ವಹಿಸಿದ್ದರು. ರಾಷ್ಟ್ರೀಯ ಕಾರ್ಯಕ್ರಮದ ಬಗ್ಗೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿ ಆರೋಗ್ಯವಂತ ಮಗುವಿಗೆ ಬಹುಮಾನ ವಿತರಿಸಿದರು.

ವೇದಿಕೆಯಲ್ಲಿ ಚಂದ್ರವತಿ, ಶಿಕ್ಷಕಿ ಚಂದ್ರವತಿ, ಅಂಗನವಾಡಿ ಕಾರ್ಯಕರ್ತೆಯಾರಾದ ಬಿಂದು, ಸೀಮ, ಜರೀನಾ, ಆಶಾ ಕಾರ್ಯಕರ್ತೆಯರು ಇದ್ದರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ತುಳಸಿ, ಅಲೀನಾ ಪ್ರಾರ್ಥಿಸಿ, 7ನೇ ಹೊಸಕೋಟೆ ಆರೋಗ್ಯ ಕಾರ್ಯಕರ್ತೆ ಸೌಮ್ಯ ಸ್ವಾಗತಿಸಿ, ಆಶಾ ಕಾರ್ಯಕರ್ತೆ ಮಂಜುಳಾ ನಿರ್ವಹಿಸಿದರು.

ಇದೇ ಸಂದರ್ಭ ಆರೋಗ್ಯವಂತ ಮಕ್ಕಳಾದ ಆಶಾ ಮತ್ತು ಹರೀಶ್ ದಂಪತಿಗಳ ಪುತ್ರ ಶಶಿಲ್ ಪ್ರಥಮ, ದಿವ್ಯ ಮತ್ತು ಚಂದ್ರ ದಂಪತಿಗಳ ಜಲನ್ ದ್ವಿತೀಯ, ಐಶ್ವರ್ಯಪ್ರಿಯ ಮತ್ತು ಅರುಣ್‍ಕುಮಾರ್ ಅಖಿಲಾನ್ ತೃತೀಯ ಬಹುಮಾನಗಳನ್ನು ನೀಡಲಾಯಿತು.